ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಶ್ರೀನಿವಾಸ ಗೌಡಗೆ ಮಾನ-ಮರ್ಯಾದೆ ಇದ್ದಲ್ಲಿ ಕೂಡಲೇ ರಾಜೀನಾಮೆ ಕೊಡಲಿ: ಕುಮಾರಸ್ವಾಮಿ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕೋಲಾರ ಶಾಸಕ ಶ್ರೀನಿವಾಸ್ ಗೌಡಗೆ ಮಾನ-ಮರ್ಯಾದೆ ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹೆಚ್‌.ಡಿ ಕುಮಾರಸ್ವಾಮಿ, ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ. ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮದ ಅಗತ್ಯವಿಲ್ಲ. ಅದರಿಂದ ಪ್ರಯೋಜನವೂ ಇಲ್ಲ. ಜೆಡಿಎಸ್‌ನಲ್ಲಿದ್ದುಕೊಂಡು ಶಾಸಕರಾಗಿ ಇಂದು ವಿರುದ್ಧವಾಗಿ ನಡೆದುಕೊಂಡು ಜನರ ಮುಂದೆ ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನ ಉಳಿಸುತ್ತಾರಾ? ಕಾಂಗ್ರೆಸ್‌ನವರಿಗೆ ಶ್ರೀನಿವಾಸ ಗೌಡರ ಮತದಿಂದ ಏನು ಸಿಕ್ಕಿತು? ನೀವು ಬಿಜೆಪಿ ಗೆಲ್ಲಿಸಿಕೊಂಡು ಜನರ ಮುಂದೆ ಹೇಗೆ ಹೋಗ್ತೀರಿ ಎಂದು ಕೆಂಡಾಮಂಡಲರಾಗಿದ್ದಾರೆ. ಇವತ್ತು ಬಿಜೆಪಿ ಗೆದ್ದರೆ ಅದು ಕಾಂಗ್ರೆಸ್‌ನಿಂದ. ಕಾಂಗ್ರೆಸ್‌ನವರು ಇನ್ನೂ ಮತ ಹಾಕುವುದಕ್ಕೆ ಬಂದಿಲ್ಲ. ಬಿಜೆಪಿಯವರಿಗೆ ಮತ ಹಾಕಲು ಕಾದು ಕುಳಿತಿದ್ದಾರೆ ಎಂದರು.

Edited By : Nagaraj Tulugeri
PublicNext

PublicNext

10/06/2022 05:21 pm

Cinque Terre

56.4 K

Cinque Terre

1

ಸಂಬಂಧಿತ ಸುದ್ದಿ