ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ರಾಜ್ಯಸಭೆ ಚುನಾವಣೆ : ಇಂದೇ ಫಲಿತಾಂಶ ಪ್ರಕಟ

ಬೆಂಗಳೂರು: ಇಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗಿರುವ ರಾಜ್ಯಸಭೆ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಒಟ್ಟು 15 ರಾಜ್ಯಗಳಲ್ಲಿ 57 ರಾಜ್ಯಸಭಾ ಸೀಟುಗಳನ್ನ ಅಲಂಕರಿಸಲು ವಿವಿಧ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಶುರುವಾಗಿದೆ.

ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ರೀತಿ ಇಂದೇ ಫಲಿತಾಂಶ ಕೂಡ ಪ್ರಕಟವಾಗಲಿದ್ದು ವಿಧಾನ ಸೌಧದ 108 ಸಂಖ್ಯೆ ಕೊಠಡಿಯಲ್ಲಿ ಮತದಾನ ನಡೆಯಲಿದೆ. ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಶಾಸಕರು ತಮ್ಮ ಹಕ್ಕು ಚಲಾಯಿಸಬಹುದು. ಹಾಗೆಯೇ ಮತ ಏಣಿಕೆಯ ಕಾರ್ಯ ಕೂಡಾ ಇಂದೇ ನಡೆಯಲಿದ್ದು ರಾತ್ರಿ 8ರೊಳಗಾಗಿ ಫಲಿತಾಂಶ ಹೊರಬಿಳಲಿದೆ.

.ಉತ್ತರ ಪ್ರದೇಶದಲ್ಲಿ 11ಸೀಟುಗಳು ಖಾಲಿ ಇದ್ದು, ಇಲ್ಲಿ ಅತಿ ಹೆಚ್ಚು ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.

.ತಮಿಳುನಾಡಿನಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ತಲಾ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

.ಬಿಹಾರದಲ್ಲಿ 5 ಮಂದಿಗೆ ಸಂಸತ್ತಿನ ಮೇಲ್ಮನೆಗೆ ಪ್ರವೇಶಿಸೋ ಅವಕಾಶ ಇದೆ.

.ಆಂಧ್ರ ಪ್ರದೇಶದಲ್ಲಿ ನಾಲ್ಕು ಸ್ಥಾನ ಹಾಗೂ ರಾಜಸ್ಥಾನದಲ್ಲಿಯೂ 4 ಸೀಟ್ಗಾಗಿ ಪೈಪೋಟಿ ಜೋರಾಗಿದೆ.

.ಕರ್ನಾಟಕದಲ್ಲಿ 4 ಸೀಟುಗಳಿಗೆ ಮಹಾಕಾಳಗವೇ ನಡೀತಿದೆ.

.ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಮೂವರು ರಾಜ್ಯಸಭೆಯಲ್ಲಿ ಸ್ಥಾನ ಅಲಂಕರಿಸಬಹುದಾಗಿದ್ದು, ಅದಕ್ಕಾಗಿ ಎಲೆಕ್ಷನ್ ಎದುರಿಸಬೇಕಿದೆ.

.ಪಂಜಾಬ್, ಹರಿಯಾಣ ಮತ್ತು ಜಾರ್ಖಂಡ್ ಇಬ್ಬರನ್ನ ರಾಜಸ್ಯಭೆಗೆ ಆರಿಸಿ ಕಳಿಸೋದಕ್ಕೆ ಉತ್ಸುಕವಾಗಿದೆ.

.ತೆಲಂಗಾಣ, ಛತ್ತೀಸ್ಗಢದಲ್ಲೂ ತಲಾ ಎರಡು ಸ್ಥಾನಕ್ಕೆ ಬಿರುಸಿನ ಪೈಪೋಟಿ ನಡೀತಿದೆ.

.ಉತ್ತರಾಖಂಡದಲ್ಲಿ ಒಂದು ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಹೀಗೆ 15 ರಾಜ್ಯಗಳಲ್ಲಿ ರಾಜಸ್ಯಭೆಗಾಗಿ ಚುನಾವಣೆ ನಡೀತಿದೆ.

Edited By : Nirmala Aralikatti
PublicNext

PublicNext

10/06/2022 07:56 am

Cinque Terre

60.91 K

Cinque Terre

2

ಸಂಬಂಧಿತ ಸುದ್ದಿ