ನವದೆಹಲಿ: ಇಸ್ಲಾಂ ಧರ್ಮ ಗುರು ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿವಾದಿತ ಹೇಳಿಕೆ ಕೊಟ್ಟಿದ್ದೇ ಬಂತು. ಇಡೀ ದೇಶ ಮತ್ತು ವಿದೇಶದಲ್ಲಿ ಭಾರೀ ಕೋಲಾಹಲವೇ ಎದ್ದು ಬಿಡ್ತು. ಅಲ್ ಕೈದಾ ಉಗ್ರ ಸಂಘಟನೆ ಆತ್ಮಾಹುತಿ ಬೆದರಿಕೆ ಕೂಡ ಒಡ್ಡಿದ್ದಾರೆ.
ಆದರೆ, ನೆದರ್‌ಲ್ಯಾಂಡ್ಸ್‌ನ ಬಲಪಂಥೀಯ ನಾಯಕ ಗೀರ್ಟ್ ವಿಲ್ಡರ್ಸ್ ಮಾತ್ರ ನೂಪುರ್ ಶರ್ಮಾ ಬೆಂಬಲಕ್ಕೆ ನಿಂತು ಬಿಟ್ಟಿದ್ದಾರೆ. ಅಲ್ ಕೈದಾದಂತಹ ಇಸ್ಲಾಮಿಕ್ ಉಗ್ರರು ಅನಾಕರಿಕತೆಯನ್ನ ತೋರುತ್ತಿದ್ದಾರೆ. ಭಾರತ ಇದಕ್ಕೆ ತಲೆಬಾಗಲೇ ಬಾರದು ಅಂತಲೇ ಡಚ್ ಸಂಸದ ಗೀರ್ಟ್ ಹೇಳಿದ್ದಾರೆ.
ನೂಪುರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ. ಆದರೆ, ಇಸ್ಲಾಮಿಕ್ ರಾಷ್ಟ್ರಗಳು ಇದನ್ನ ವಿರೋಧಿಸಿವೆ. ಇದು ನಿಜಕಕ್ಕೂ ಹಾಸ್ಯಾಸ್ಪದ ಎಂದೇ ಗೀರ್ಟ್ ವಿಲ್ಡರ್ಸ್ ಟೀಕಿಸಿದ್ದಾರೆ.
"ಭಾರತದ ನನ್ನ ಸ್ನೇಹಿತರೇ ಇಸ್ಲಾಮಿಕ್ ದೇಶಗಳ ಬೆದರಿಕೆಗೆ ಹೆದರಬೇಡಿ" ನಿಮ್ಮ ರಾಜಕಾರಣಿ ನೂಪುರ್ ಶರ್ಮಾ ಅವರನ್ನ ಸಮರ್ಥಿಸಿಕೊಂಡು ಹೆಮ್ಮೆ ಪಡಿ ಹಾಗೂ ಅಛಲವಾಗಿಯೇ ಇರಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
PublicNext
09/06/2022 09:01 pm