ತುಮಕೂರು: ನಾಳೆನೇ ರಾಜ್ಯ ಸಭಾ ಚುನಾವಣೆ ಇದೆ. ಇದರಲ್ಲಿ ಜಯ ಸಾಧಿಸಲೇಬೇಕು ಅಂತ ಜೆಡಿಎಸ್ ಕಸರತ್ತು ನಡಿಸಿದೆ. ಆದರೆ, ಇದೇ ವೇಳೆ ತುಮಕೂರಿನ ಇಬ್ಬರ ಶಾಸಕರ ನಡೆ ಪಕ್ಷಕ್ಕೆ ತಲೆನೋವಾಗಿ ಬಿಟ್ಟಿದೆ.
ಹೌದು. ತುಮಕೂರು ಶಾಸಕ ಗೌರಿಶಂಕರ್ ಸದ್ಯ ಊರಲ್ಲೆ ಇಲ್ಲ. ಫಾರೆನ್ ಟ್ರಿಪ್ ಹೋಗಿದ್ದಾರೆ. ಇಂದು ಸಂಜೆ ಬರುವೆ. ನಾಳೆ ಮತವನ್ನೂ ಹಾಕುವೆ ಅಂತಲೇ ಹೇಳಿದ್ದಾರೆ.ಇದು ಜೆಡಿಎಸ್ ಪಕ್ಷದಲ್ಲಿ ಆತಂಕ ಹೆಚ್ಚಿಸಿದೆ. ಇಂದು ಸಂಜೆ ನಡೆಯೋ ಸಭೆಯಲ್ಲೂ ಗೌರಿಶಂಕರ್ ಬರೋದು ಡೌಟ್ ಅಂತಲೇ ಹೇಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಆಮಿಷಕ್ಕೆ ಒಳಗಾಗಿ ಗೌರಿಶಂಕರ್ ಉಲ್ಟಾ ಹೊಡೀತಾರಾ ಅನ್ನೋ ಆತಂಕವೂ ಜೆಡಿಎಸ್‌ಪಕ್ಷವನ್ನ ಈಗ ಕಾಡುತ್ತಿದೆ. ಇನ್ನು ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ಜೆಡಿಎಸ್‌ಗೆ ಕೈ ಕೊಡುವ ಸಾಧ್ಯತೆ ಹೆಚ್ಚೆ ಇದ್ದು, ಜೆಡಿಎಸ್‌ಗೆ ಭದ್ರಕೋಟೆಯಂತಿದ್ದ ತುಮಕೂರಿನ ಈ ಇಬ್ಬರ ಶಾಸಕರ ನಡೆ ಈಗ ಪಕ್ಷಕ್ಕೆ ದೊಡ್ಡ ಏಟುಕೊಟ್ಟಂತಿದೆ.
PublicNext
09/06/2022 06:08 pm