ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮೇಲೆ ಬಸಪ್ಪ ಒಳಗೆ ವಿಷಪ್ಪ': ಸಿದ್ದರಾಮಯ್ಯ ಮೇಲೆ ಛಲವಾದಿ ನಾರಾಯಣಸ್ವಾಮಿ ಕಿಡಿ

ಬೆಂಗಳೂರು: ಆರ್‌ಎಸ್‌ಎಸ್ ವಿರೋಧಿಸುವ ಭರದಲ್ಲಿ ಚಡ್ಡಿ ವಿಚಾರ ಮುನ್ನೆಲೆಗೆ ತಂದ ಕಾಂಗ್ರೆಸ್ ನಾಯಕರು ಕೆಲವೆಡೆ ಆರ್‌ಎಸ್‌ಎಸ್ ಚಡ್ಡಿಗೆ ಬೆಂಕಿ ಹಾಕುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಯ ನಡುವೆ ಕಾಂಗ್ರೆಸ್-ಬಿಜೆಪಿ ನಾಯಕರು ಪರಸ್ಪರ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಈಗ ರಾಜ್ಯ ಬಿಜೆಪಿ ಪರಿಶಿಷ್ಟ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಅವರು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ವಾಕ್‌ಪ್ರಹಾರ ನಡೆಸಿದ್ದಾರೆ.

'ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮಂತಹ ಜಾತಿ ವಿಂಗಡಿಸುವ ಮನಸ್ಥಿತಿಯವರು ಬಿಜೆಪಿ ಮತ್ತು ಸಂಘದಲ್ಲಿಲ್ಲ. ನಿಮಗೆ ಜಾತಿ, ಧರ್ಮಗಳನ್ನ ಒಡೆದು ಗೊತ್ತೇ ಹೊರತು ಜೋಡಿಸಿ ಗೊತ್ತಿಲ್ಲ. ನಿಮ್ಮ ಚೆಡ್ಡಿ ಸಂಸ್ಕೃತಿಯನ್ನು ನಾನು ಖಂಡಿಸಿದ್ದೇನೆ ಅಷ್ಟೇ, ಅದನ್ನು ನಿಮ್ಮ ವಕ್ರಬುದ್ಧಿಯಿಂದ ತಿರುಚಬೇಡಿ. ಎಲ್ಲರ ಚೆಡ್ಡಿಗೂ ನಿಮ್ಮ ಚೆಡ್ಡಿಯಷ್ಟೇ ಗೌರವವಿದೆ.' 'ನಿಮ್ಮ ಕಪಟ ನಾಟಕ ಎಳೆ ಎಳೆಯಾಗಿ ಬಿಡಿಸಿಡುವ ಕಾಲ ಸನಿಹವಾಗಿದೆ. ನಿಮ್ಮ ರಾಜಕೀಯ ನಡೆಯನ್ನು ನಾಲ್ಕು ದಶಕಗಳಿಂದ ಬಲ್ಲೆ. ನನ್ನಬಗ್ಗೆ ಅನುಕಂಪದ ಮಾತುಗಳು ಬೇಕಿಲ್ಲ, ನೀವು "ಮೇಲೆ ಬಸಪ್ಪ ಒಳಗೆ ವಿಷಪ್ಪ" ಎಂಬುದು ನನಗೆ ಗೊತ್ತು ಅದನ್ನು ಜನರಿಗೆ ಮುಟ್ಟಿಸುವ ಕಾರ್ಯ ಶುರುವಾಯಿತು ಅಷ್ಟೇ' ಎಂದಿರುವ ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಮೇಲೆ ಕಿಡಿ ಕಾರಿದ್ದಾರೆ.

Edited By : Nagaraj Tulugeri
PublicNext

PublicNext

08/06/2022 04:29 pm

Cinque Terre

24 K

Cinque Terre

9

ಸಂಬಂಧಿತ ಸುದ್ದಿ