ಪಣಜಿ: ಇತ್ತೀಚಿಗೆ ಗೋವಾದಲ್ಲಿ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೆ ಇಂತಹದ್ದೊಂದು ಪ್ರಕರಣಕ್ಕೆ ಗೋವಾ ಸಾಕ್ಷಿಯಾಗಿದೆ. ಹಣದ ಆಸೆಗಾಗಿ ತಮ್ಮ ಗೆಳೆಯನನ್ನೆ ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಡೆದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪಣಜಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ತಮ್ಮ ಸ್ನೇಹಿತ ದೀಪಕ್‌ಕುಮಾರ್ ಕೇಸರಿ ಎಂಬ ವ್ಯಕ್ತಿಯನ್ನು ಅಪಹರಿಸಿ ಪಣಜಿ ಸಮೀಪದ ಕರಂಜಾಳೆಂ ಫ್ಲಾಟ್‌ನಲ್ಲಿ ಕೂಡಿಹಾಕಿ 70 ಲಕ್ಷ ರೂ.ಗಳಿಗಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದತೆ ಪೊಲೀಸರು ಬಿಹಾರ ಮೂಲದ ಆಶಿಷ ಕುಮಾರ್ ಸಿಂಗ್ (33), ಅಂಬರಕುಮಾರ್ ಸಿಂಗ್ (34 ), ಮಹಾರಾಷ್ಟ್ರ ಮೂಲದ ವರದ ಮುನದಾದಾ(27), ಬೆಂಗಳೂರು ಮೂಲದ ಮೋನಿಕಾ ಪ್ರಿಯಾ (31) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಣಜಿ ಪೊಲೀಸರು ಐವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
PublicNext
07/06/2022 06:24 pm