ಬೆಂಗಳೂರು: ರಸಗೊಬ್ಬರು ಹಾಗೂ ಬಿತ್ತನೆ ಬೀಜದ ವಿಷಯದಲ್ಲಿ ರಾಜ್ಯ ಸರ್ಕಾರದಿಂದಲೇ ದೊಡ್ಡ ಗೋಲ್ಮಾಲ್ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.
ಸರ್ಕಾರವೇ ಬ್ಲ್ಯಾಕ್ ಮಾರ್ಕೆಟ್ ಮಾಡಿಸುತ್ತಿದೆ. ನವಲಗುಂದದಲ್ಲಿ 23 ರೈತರಿಗೆ ಮಾತ್ರ ಗೊಬ್ಬರ ಕೊಡಲಾಗಿದ್ದು,ರೈತರ ಹೋರಾಟಗಾರರ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ರೈತರೇ ನೀವೂ ಪಕ್ಷಾತೀತವಾಗಿಯೇ ಹೋರಾಡಲು ಸಜ್ಜಾಗಲೇಬೇಕು. ಸಜ್ಜಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರೈತರಿಗೆ ಕರೆ ಕೂಡ ಕೊಟ್ಟಿದ್ದಾರೆ.
PublicNext
07/06/2022 03:17 pm