ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS ಚಡ್ಡಿ ಸುಡ್ತೇವೆ ಎಂದ ಸಿದ್ದರಾಮಯ್ಯನವರಿಗೆ ಹಳೇ ಚಡ್ಡಿ ಕಳುಹಿಸಿದ RSS ಕಾರ್ಯಕರ್ತರು

ಬೆಂಗಳೂರು: ರಾಜ್ಯದಲ್ಲಿ ಸದ್ಯ ಚಡ್ಡಿ ಚರ್ಚೆ ಹೆಚ್ಚಾಗಿದೆ. ಹೌದು ವಿರೋಧ ಪಕ್ಷದ ನಾಯಕ ಸಿದ್ದರಾಯ್ಯನವರು ಆರ್ ಎಸ್ ಎಸ್ ನ ಚಡ್ಡಿ ಸುಡುವ ಅಭಿಯಾನ ಮಾಡಬೇಕಾಗುತ್ತೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ RSS ಕಾರ್ಯಕರ್ತರು ಮನೆ ಮನೆಯಿಂದ ಹಳೇಯ ಚಡ್ಡಿಗಳನ್ನು ಸಂಗ್ರಹಿಸಿ ಸಿದ್ದರಾಯ್ಯನವರಿಗೆ ಕಳುಹಿಸಿಕೊಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆಯಲ್ಲಿ RSS ಕಾರ್ಯಕರ್ತರು ಮನೆ ಮನೆಯಿಂದ ಚಡ್ಡಿ ಸಂಗ್ರಹಿಸಿ ಪಾರ್ಸಲ್ ಮಾಡಿದ್ದಾರೆ. ನೀವು ಜೀವನ ಪೂರ್ತಿ ಕಳೆದರೂ ನಮ್ಮ ಚಡ್ಡಿ ಸುಟ್ಟು ಹಾಕಲು ಸಾಧ್ಯವಿಲ್ಲ. ಕೋಟ್ಯಾಂತರ ದೇಶಭಕ್ತರು RSS ನಲ್ಲಿದ್ದಾರೆ. RSS ಬಗ್ಗೆ ತಿಳಿಯದೆ ಸಿದ್ದರಾಮಯ್ಯ ಈ ರೀತಿ ಮಾತಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RSS ಕ್ಯಾಂಪ್ ನಲ್ಲಿ ಸಿದ್ದರಾಮಯ್ಯ ಭಾಗವಹಿಸಲಿ, ಸಂಘದ ಸಿದ್ಧಾಂತ, ದೇಶ ಭಕ್ತಿ ತಿಳಿಯುತ್ತದೆ. ಎಲ್ಲಾ ಕಡೆ ಚಡ್ಡಿ ಸುಡುತ್ತೇವೆಂದು ಕೈ ನಾಯಕರು ಹೇಳಿದ್ದಾರೆ. ಅವರಿಗೆ ತೊಂದರೆ ಆಗಬಾರದು, ಅವರು ಇಲ್ಲಿಯವರೆಗೆ ಬರಬಾರದು. ಹಾಗಾಗಿ ನಾವೇ ಚಡ್ಡಿ ಪಾರ್ಸಲ್ ಮಾಡಿದ್ದೇವೆ. ಕಾಂಗ್ರೆಸ್ ಕೇಂದ್ರ ಕಚೇರಿಗೆ ಕಳುಹಿಸಿ ಕೊಡ್ತೀವಿ ಅಲ್ಲೇ ಸುಡಲಿ, ಇಲ್ಲಿಗೆ ಬರುವುದು ಬೇಡ ಎಂದಿರುವ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಳೇ ಚಡ್ಡಿ ಸಂಗ್ರಹ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

06/06/2022 05:30 pm

Cinque Terre

50.15 K

Cinque Terre

29