ಕಲಬುರಗಿ: 'ನನಗೇನು ಚಡ್ಡಿ ವಿಚಾರ ಬೇಕಿಲ್ಲ. ಯಾರೂ ಬೇಕಾದರೂ ಚಡ್ಡಿ ಬಿಚ್ಚಿಕೊಳ್ಳಲಿ. ಆದರೆ ಜನರಿಗೆ ಮಾತ್ರ ಚಡ್ಡಿ ತೊಡಿಸುವ ದುಸ್ಸಾಹಸ ಸರಕಾರ ಮಾಡದಿದ್ದರೆ ಸಾಕು ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಸಂಘ ಪರಿವಾರದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಮಣ್ಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ಪತ್ರಕರ್ತರ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಏನು ಉಳಿದುಕೊಂಡಿಲ್ಲ. ಬರೀ ಜಾತಿ ವಿವಾದಗಳು, ಹಗರಣಗಳೇ ಪ್ರಮುಖವಾಗಿವೆ. ಯಾರು ಯಾರು ಕಿತ್ತಾಡಿಕೊಂಡು ಚಡ್ಡಿ ಬಿಚ್ಚಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ನನಗೆ ಚಡ್ಡಿ ರಾಜಕಾರಣ ಬೇಕಾಗಿಲ್ಲ' ಎಂದು ಲೇವಡಿ ಮಾಡಿದ್ದಾರೆ.
ಈಗ ನಾನೇನು ಮಾತನಾಡುವುದಿಲ್ಲ. ರಾಜ್ಯ ಸಭೆಯ ಚುನಾವಣೆಗಳ ಬಳಿಕ ಮಾತನಾಡುತ್ತೇನೆ. ಸದ್ಯಕ್ಕೆ ಮೂರು ಪಕ್ಷಗಳಲ್ಲಿ ತಮ್ಮದೇ ಆಗಿರುವ ತಂತ್ರಗಳಿವೆ. ಲೆಕ್ಕಾಚಾರಗಳಿವೆ. ಬಹುತೇಕ ಅಡ್ಡ ಮತದಾನ ಸಾಧ್ಯವಾಗಲಿದೆ ಎನ್ನುವ ಲೆಕ್ಕಾಚಾರವೇ ಇಂದಿನ ದಿನಗಳ ಚರ್ಚೆಯೂ ಆಗಿದೆ. ಆದ್ದರಿಂದ ಈಗಲೇ ಏನೂ ಮಾತನಾಡುವಂತಿಲ್ಲ ಎಂದರು.
PublicNext
06/06/2022 05:02 pm