ಬೆಂಗಳೂರು: ಆಮ್ ಆದ್ಮಿ ಪಕ್ಷ ಈಗ ಕರ್ನಾಟಕದಲ್ಲೂ ನೆಲೆಯೂರಲು ಪಕ್ಕಾ ಪ್ಲಾನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಈಗ ಕಾಂಗ್ರೆಸ್‌ನ ಹಿರಿಯ ನಾಯಕರನ್ನ ತನ್ನತ್ತ ಸೆಳೆಯಲು ಮುಂದಾಗಿದೆ.
ಹೌದು. ಸಜ್ಜನ ರಾಜಕಾರಣಿ ಮಾಜಿ ಸಚಿವ ಕಿಮ್ಮಣೆ ರತ್ನಾಕರ, ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮತ್ತು ವಿ.ಎಲ್.ಸುದರ್ಶನ್ ಅವರನ್ನ ಆಮ್ ಆದ್ಮಿ ಪಕ್ಷಕ್ಕೆ ಕರೆತರೋಕೆ ಮಾತು ಕಥೆ ನಡೆದಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಈ ಸಂಬಂಧ ಎರಡು ಸುತ್ತು ಮಾತುಕಥೆ ಆಗಿದೆ. ಶೀಘ್ರದಲ್ಲಿಯೇ ಈ ಮೂವರು ನಾಯಕರು ತಮ್ಮ ನಿರ್ಧಾರ ತಿಳಿಸಲಿದ್ದಾರೆಂದು ಬಲ್ಲ ಮೂಗಳು ಹೇಳಿವೆ.
PublicNext
06/06/2022 10:04 am