ದೋಹಾ: ಭಾರತದಲ್ಲಿ ಕೊಟ್ಟ ಪ್ರವಾದಿ ಮೊಹ್ಮದ್ ಬಗೆಗಿನ ಹೇಳಿಕೆ ಭಾರೀ ವಿವಾದ ಎಬ್ಬಿಸಿದೆ. ಕತಾರ್, ಇರಾನ್,ಕುವೈತ್ ನಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕುವೈತ್ ನಲ್ಲಿರೋ ಭಾರತೀಯ ರಾಯಭಾರಿಗಳನ್ನ ಕರೆಸಿಕೊಂಡ ಇಲ್ಲಿಯ ವಿದೇಶಾಂಗ ಸಚಿವಾಲಯ, ಈ ರೀತಿ ಹೇಳಿಕೆ ಸರಿಯಲ್ಲ. ಧರ್ಮ ಗುರಿವಿನ ಬಗ್ಗೆ ಕೊಟ್ಟ ಹೇಳಿಕೆ ಒಪ್ಪತಕ್ಕದಲ್ಲ ಅಂತಲೂ ಅಭಿಪ್ರಾಯ ಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕತಾರ್ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಸಭೆ ನಡೆಸಿದ್ದಾರೆ. ಧಾರ್ಮಿಕ ವ್ಯಕ್ತಿಗಳನ್ನ ಅವಮಾನಿಸೋದು ಕಳವಳಕಾರಿ ಅಂತಲೇ ಹೇಳಿದ್ದಾರೆ. ಅವಮಾನಕರ ಹೇಳಿಕೆ ನೀಡಿರೋ ಪಕ್ಷದ ನಾಯಕ ಸಾರ್ವಜನಿಕವಾಗಿಯೇ ಕ್ಷಮೆ ಕೇಳಬೇಕು.ಹೇಳಿಕೆ ನೀಡಿರೋ ಪಕ್ಷದ ನಾಯಕನನ್ನ ಅಮಾನತ್ತುಗೊಳಿಸಿರೋದು ಸ್ವಾಗತಾರ್ಹ ಅಂತಲೂ ದೀಪಕ್ ಮಿತ್ತಲ್ ಹೇಳಿದ್ದಾರೆ.
PublicNext
06/06/2022 07:01 am