ನವದೆಹಲಿ: ಗ್ಯಾನವಾಪಿ ಮಸೀದಿ ಬಗ್ಗೆ ಟಿವಿ ವಾಹಿನಿಯ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಇಬ್ಬರು ಬಿಜೆಪಿ ಸದಸ್ಯರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.
ನೂಪುರ್ ಶರ್ಮಾ ಹಾಗೂ ನವೀನ್‌ಕುಮಾರ್ ಜಿಂದಾಲ್ ಎಂಬಾತರೇ ಅಮಾನತಿಗೆ ಒಳಗಾದವರು. ಇವರ ಈ ಹೇಳಿಕೆ ನಂತರವೇ ಕಾನ್ಪುರದಲ್ಲಿ ಗಲಭೆ ಸೃಷ್ಟಿಯಾಯಿತು ಎಂಬ ಆರೋಪ ಇದೆ. ಅಲ್ಪಸಂಖ್ಯಾತರ ಬಗ್ಗೆ ಇವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಭಾರತೀಯ ಜನತಾ ಪಕ್ಷ ಎಲ್ಲ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮ ಹಾಗೂ ಧಾರ್ಮಿಕ ಮುಖಂಡರ ಅವಹೇಳನವನ್ನು ಖಂಡಿಸುತ್ತದೆ ಎಂದಿದ್ದಾರೆ.
PublicNext
05/06/2022 05:38 pm