ಬೆಂಗಳೂರು: ಪಿಎಸ್ಐ ಅಕ್ರಮ ಪ್ರಕರಣ ಕುರಿತಂತೆ ರಾಜ್ಯದ ಎಂಟು ಎಂಎಲ್ಎ ಗಳು ಗೃಹ ಮಂತ್ರಿಗೆ ಲಿಖಿತ ಪತ್ರ ಬರೆದಿದ್ದಾರೆ.ಶಾಸಕರಾದ ಕೆ ಎಸ್ ಲಿಂಗೇಶ್. ಪಿ ರಾಜೀವ್.ಸುನಿಲ್ ಬಿ ನಾಯ್ಕ್. ರಘುಪತಿ ಭಟ್.ರಾಜಕುಮಾರ ಪಾಟೀಲ್ ತೇಲ್ಕೂರ.ಲಾಲಾಜಿ ಆರ್ ಮೆಂಡನ್. ಹರೀಶ್ ಪೂಂಜ. ಜೆ ಎನ್ ಗಣೇಶ್.ಕೆ ರಾಘವೇಂದ್ರ ಹಿಟ್ನಾಳ ಗೃಹ ಸಚಿವ ರಿಗೆ ಪತ್ರ ಬರೆದು ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣ ಪರೀಕ್ಷೆ ರದ್ದು ಮಾಡಲಾಗಿದೆ.
ಸರ್ಕಾರದ ಈ ನಿರ್ಧಾರ ದಿಂದ ಬಡ ಮಕ್ಕಳಿಗೆ ಅನ್ಯಾಯ ಅಗಿದೆ. ತಪ್ಪು ಮಾಡಿದವರು ಹಾಗು ನ್ಯಾಯವಾಗಿ ಪರೀಕ್ಷೆ ಬರೆದವರ ಬೇರ್ಪಡಿಸುವ ಕೆಲಸ ಆಗಬೇಕು ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಬಡಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಸಿಐಡಿ ಇನ್ನು ತನಿಖೆ ನಡೆಸುತ್ತಿದ್ದು ತನಿಖೆ ಪೂರ್ಣವಾಗುವ ಮೊದಲೆ ರದ್ದು ಮಾಡಿದ್ದು ಕಷ್ಟವಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಅಗ್ಬೇಕು ಜೊತೆಗೆ ಪ್ರಮಾಣಿಕರಿಗೆ ನ್ಯಾಯ ಸಿಗಬೇಕು ಎಂದು ಗೃಹ ಸಚಿವರಿಗೆ ಮನವಿ ಶಾಸಕರು ಮನವಿ ಮಾಡಿದ್ದಾರೆ.
PublicNext
04/06/2022 07:16 pm