ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಸಭೆ ಚುನಾವಣೆ- "ಕೈ" ಕೊಟ್ಟ ದೇವೇಗೌಡರ ತಂತ್ರ !

ಬೆಂಗಳೂರು: ರಾಜ್ಯ ಸಭಾ ಚುನವಾಣೆ ತಾರಕಕ್ಕೇರಿದೆ. ಈ ಚುನಾವಣೆಯ ನಾಲ್ಕನೆ ಸ್ಥಾನಕ್ಕೆ ಮೂರು ಪಕ್ಷಗಳೂ ಸೆಣಸಾಟ ನಡೆಸಿವೆ.

ಹೌದು. ಕಾಂಗ್ರೆಸ್, ಬಿಜೆಪಿ,ಜೆಡಿಎಸ್,ಗೆ ರಾಜ್ಯ ಸಭಾ ಚುನಾವಣೆ ನಿಜಕ್ಕೂ ಪ್ರತಿಷ್ಠೆ ಆದಂತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಎರಡನೆ ಅಭ್ಯರ್ಥಿಯನ್ನ ಕಣಕಿಳಿಸಿ ಬಿಟ್ಟಿವೆ. ನಿನ್ನೆವರೆಗೂ ಎರಡನೇ ಅಭ್ಯರ್ಥಿಯನ್ನ ಪಕ್ಷಗಳು ಹಿಂದೆಕ್ಕೆ ಪಡೆಯುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಸಾಧ್ಯವಾಗಿಯೇ ಇಲ್ಲ.

ಈ ನಿಟ್ಟಿನಲ್ಲಿಯೇ ದೊಡ್ಡ ಗೌಡರು ಕಾಂಗ್ರೆಸ್ ಅಧಿನಾಯಕಿ ಸೋನಿಯಾವರಿಗೆ ಪೋನ್ ಮಾಡಿದ್ದರು. ಮಲ್ಲಿಕಾರ್ಜುನ್ ಖರ್ಗೆ ಅವರಿಗೂ ಹೇಳಿದ್ದರು. ಆದರೆ, ಮನ್ಸೂರ್ ಅಲಿ ಖಾನ್ ನಾಮಪತ್ರ ಹಿಂದಕ್ಕೆ ಪಡೆಯಲೇ ಇಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೂಡ ಸ್ಪಷ್ಟವಾಗಿಯೇ ಹೇಳಿ ಬಿಟ್ಟಿದ್ದರು.ಯಾವುದೇ ಕಾರಣಕ್ಕೂ ಎರಡನೇ ಅಭ್ಯರ್ಥಿಯನ್ನ ಹಿಂದಕ್ಕೆ ಪಡೆಯೋ ಮಾತೇ ಇಲ್ಲ ಅಂತ ಹೇಳಿ ಬಿಟ್ಟದ್ದರು. ಇದರ ಪರಿಣಾಮ ಖರ್ಗೆ ಅವರ ಶ್ರಮ-ದೊಡ್ಡಗೌಡರ ತಂತ್ರ 'ಕೈ'ಕೊಟ್ಟಿದೆ.

Edited By :
PublicNext

PublicNext

04/06/2022 04:28 pm

Cinque Terre

161.56 K

Cinque Terre

11

ಸಂಬಂಧಿತ ಸುದ್ದಿ