ಬೆಂಗಳೂರು: 2023 ರ ಚುನಾವಣೆಯಲ್ಲಿ ಬಹುಮತದಿಂದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ಅಧಿಕಾರಕ್ಕೆ ಬರದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಪರಿಷತ್ ನಲ್ಲಿ ಹೆಚ್ಚು ಸ್ಥಾನ ಇದ್ದರೂ ಮುಸ್ಲಿಮರಿಗೆ ಯಾಕೆ ವಿಪಕ್ಷ ಸ್ಥಾನ ಕೊಟ್ಟಿಲ್ಲ. ಎರಡನೇ ಅಭ್ಯರ್ಥಿ ಯಾಕೆ ಕಾಂಗ್ರೆಸ್ ಹಾಕಿದ್ದಾರೆ ಅಂತ ಬಂದು ಪ್ರಮಾಣ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು.
ಜೆಡಿಎಸ್ ಅಭಿವೃದ್ಧಿ ರಾಜಕೀಯ ಮಾಡುತ್ತಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪಾಲಿಗೆ ಕೇವಲ ವೋಟ್ ಬ್ಯಾಂಕ್ ಮಾತ್ರ ಎಂದು ಕಿಡಿಕಾರಿದರು.
ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸೋಕೆ ಕಾಂಗ್ರೆಸ್ ಅಭ್ಯರ್ಥಿ ಹಾಕಿದೆ. ಜೆಡಿಎಸ್ 2023 ಕ್ಕೆ ಬರೊಲ್ಲ ಅಂತ ಕಾಂಗ್ರೆಸ್ ಅವರು ಚಾಲೆಂಜ್ ತಗೋತಾರಾ ಎಂದು ಪ್ರಶ್ನಿಸಿದರು. ಎರಡು ಪಕ್ಷಗಳಿಗಿಂತ ಹೆಚ್ಚು ಸ್ಥಾನ ನಾವು ಪಡೆಯುತ್ತೇವೆ. ಇಲ್ಲದೆ ಹೋದರೆ ನಾನು ರಾಜೀನಾಮೆ ನಿವೃತ್ತಿ ಪಡೆಯುತ್ತೇನೆ. ಕಾಂಗ್ರೆಸ್ ಈ ಚಾಲೆಂಜ್ ತೆಗೆದುಕೊಳ್ಳಲಿ ಎಂದು ಹೇಳಿದರು.
PublicNext
03/06/2022 08:27 pm