ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನೇ ರದ್ದು ಮಾಡಿ: ಎಂ. ಬಿ. ಪಾಟೀಲ್ ಆಗ್ರಹ

ದಾವಣಗೆರೆ: ರಾಜ್ಯದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನೇ ರದ್ದು ಮಾಡುವಂತೆ ಮಾಜಿ ಸಚಿವ ಎಂ. ಬಿ. ಪಾಟೀಲ್ ಅವರು ಒತ್ತಾಯಿಸಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯದಲ್ಲಿ ಬಸವಣ್ಣ, ಕೆಂಪೇಗೌಡ, ಗೌತಮ ಬುದ್ದ ಸೇರಿ ಹಲವು ಮಹಾಪುರುಷರಿಗೆ ಗೌರವ ನೀಡಬೇಕು. ಆದರೆ, ಪಠ್ಯದಲ್ಲಿ ಅವರ ಹೆಸರಿಗೆ ಅಪಚಾರ ಮಾಡಬಾರದು ಎಂದು ಹೇಳಿದರು.

ಮಹಾಪುರುಷರು ಮುಂದಿನ ಪೀಳಿಗೆಗೂ ಮಾರ್ಗದರ್ಶಕರು. ಈ ವಿಚಾರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಬಹಳ ಗೊಂದಲ ಸೃಷ್ಟಿ ಮಾಡಿದೆ. ಹೀಗಾಗಿ, ಇದನ್ನ ಕೂಡಲೇ ವಜಾಗೊಳಿಸಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸಾಕಷ್ಟು ಚಿಂತಕರು, ಸಾಹಿತಿಗಳು, ಬುದ್ದಿಜೀವಿಗಳಿದ್ದಾರೆ. ಒಳ್ಳೆಯ ಜನರಿಂದ ಪರಿಷ್ಕರಣೆ ಮಾಡಿಸಿ. ಸತ್ಯ ಸಂಗತಿ ನಾಡಿಗೆ ತಿಳಿಸಲಿ. ಇತಿಹಾಸ ತಿರುಚುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು ಎಂದು ಹೇಳಿದರು.

ಸಚಿವ ಬಿ ಸಿ ನಾಗೇಶ್ ಮನೆ ಮೇಲೆ ದಾಳಿ ಯತ್ನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆಲ್ಲ ಕಾನೂನು ಕೈಗೆ ತೆಗೆದು ಕೊಳ್ಳಬಾರದು. ಇದರಲ್ಲಿ ನಮಗೆ ನಂಬಿಕೆಯೂ ಇಲ್ಲ. ಸಮಯ ಸಿಕ್ಕರೆ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೆ ಚರ್ಚಿಸುತ್ತೇನೆ. ಮಹಾಪುರುಷರ ಹೆಸರಲ್ಲಿ ಗೊಂದಲ ಸೃಷ್ಟಿ ಮಾಡಿದ್ದನ್ನ ಯಾರೂ ಒಪ್ಪಲ್ಲ ಎಂದು ಅಭಿಪ್ರಾಯಪಟ್ಟರು.

Edited By : Manjunath H D
PublicNext

PublicNext

03/06/2022 10:35 am

Cinque Terre

54.13 K

Cinque Terre

1

ಸಂಬಂಧಿತ ಸುದ್ದಿ