ಗಾಂಧಿನಗರ: ಗುಜರಾತ್‌ನ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ಯುವತಿಯೊಟ್ಟಿಗೆ ಏಕಾಂತದಲಿದ್ದು ಪತ್ನಿ ರೇಷ್ಮಾಗೆ ರೆಡ್ ಹ್ಯಾಡ್ ಆಗಿಯೇ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ ಕೊಂಚ ಕಲರ್ ಫುಲ್ ವ್ಯಕ್ತಿ ಎಂಬ ಆರೋಪವೂ ಇದೆ. ಇದರ ಬೆನ್ನಲ್ಲಿಯೇ ಈ ಒಂದು ಘಟನೆ ಅದಕ್ಕೆ ಪುಷ್ಟಿ ನೀಡುವಂತಿದ್ದು, ಪತ್ನಿ ರೇಷ್ಮಾ ಸ್ವತಃ ಪತಿಯ ಈ ರಂಗೀನ ಆಟವನ್ನ ಕಣ್ಣಾರೆ ಕಂಡು ಕೆಂಡಾಮಂಡಲರಾಗಿದ್ದಾರೆ. ಪತಿಗೆ ಮನ ಬಂದಂತೆನೂ ಬೈದು ಹಾಕಿದ್ದಾರೆ.
ಪತಿಯ ಜೊತೆಗೆ ಇದ್ದ ಯುವತಿಯನ್ನೂ ಮನಸಾರೆ ಬೈದು ಕಪಾಳಕ್ಕೂ ಹೊಡೆದಿದ್ದಾರೆ. ಆದರೆ, ಇದೇ ವೇಳೆ ಪತಿ ಭರತ್ ಸಿಂಗ್, ನನ್ನ ಲೈಫ್ ನಾನು ಏನು ಬೇಕಾದರೂ ಮಾಡುತ್ತೇನೆ. ಎಷ್ಟು ಬೇಕೋ ಅಷ್ಟು ಹುಡುಗಿಯರ ಜೊತೆಗೆ ಮೋಜು ಮಾಡ್ತೇನೆ ಅಂತಲೂ ಗುಜರಾತಿ ಭಾಷೆಯಲ್ಲಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಈ ವೀಡಿಯೋ ವೈರಲ್ ಆಗುತ್ತಲೇ ಇದೆ. ಹಾಗೇನೆ ಭರತ್ ಸಿಂಗ್ ಸೋಳಕ್ಕೆ ಕಾಮಪ್ರಚೋದಕ ಅಂತಲೇ ಕಾಂಗ್ರೆಸ್ ನ ಮಹಿಳಾ ನಾಯಕಿ ವಂದನಾ ಪಾಟೀಲ್ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಆದರೆ ಅದು ಏನ್ ಆಯ್ತೋ ಏನೋ. ಪತ್ನಿ ರೇಷ್ಮಾ ಕೂಡ ಪತಿ ವಿರುದ್ಧ ಈ ಹಿಂದೆ ಹಿಂಸೆ ಕೊಡ್ತಾನೆ ಎಂದು ದೂರು ಕೊಟ್ಟಿದ್ದರು.
PublicNext
02/06/2022 01:59 pm