ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರದಲ್ಲಿ ಹಿಂದೂಗಳ ಮಹಾ ವಲಸೆ-ನಾಳೆ ಅಮಿತ್ ಶಾ ಹೈವೋಲ್ಟೇಜ್ ಸಭೆ

ಶ್ರೀನಗರ: ಕಾಶ್ಮೀರ್ ನಲ್ಲಿ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಅದರಲ್ಲೂ ಮುಸ್ಲಿಮೇತರ ಜನ ತಲ್ಲಣಗೊಂಡಿದ್ದಾರೆ. ಇವರನ್ನೇ ಗುರಿಯಾಗಿಟ್ಟುಕೊಂಡು ಹತ್ಯೆ ಕೂಡ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿ ಈಗ ಮಹಾ ವಲಸೆ ಶುರು ಆಗಿದೆ.

ಕಾಶ್ಮೀರ್ ಪಂಡಿತರ ಹತ್ಯೆ ಇಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೆ ಕಾಶ್ಮೀರ ಮನೆತನ ಶಿಕ್ಷಕಿಯನ್ನ ಉಗ್ರರು ಕೊಂದು ಹಾಕಿದ್ದರು. ಇದರಿಂದ ಇಲ್ಲಿಯ ಮುಸ್ಲಿಮೇತರ ಜನಕ್ಕೆ ಆತಂಕ ಹೆಚ್ಚಾಗಿ ವಲಸೆ ಹೆಚ್ಚಾಗುತ್ತಲೇ ಇದೆ.

ಈ ಕಾರಣಕ್ಕೇನೆ ಗೃಹ ಸಚಿವ ಅಮಿತ್ ಶಾ ನಾಳೆ ಹೈವೋಲ್ಟೇಜ್ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಣಿವೆ ಪ್ರದೇಶ ಅಲ್ಪಸಂಖ್ಯಾತರ ರಕ್ಷಣೆಗೆ ಆಡಳಿತವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಆಗಲಿದೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಈಗಾಗಲೇ ಗವರ್ನರ್ ಮನೋಜ್ ಸಿನ್ಹಾರನ್ನ ದೆಹಲಿಗೆ ಕರೆಸಿಕೊಂಡು ಎಲ್ಲ ಮಾಹಿತಿ ಪಡೆದಿದ್ದಾರೆ.

Edited By :
PublicNext

PublicNext

02/06/2022 10:39 am

Cinque Terre

30.27 K

Cinque Terre

3

ಸಂಬಂಧಿತ ಸುದ್ದಿ