ನವದೆಹಲಿ: ಕೆಂಪು ಕೋಟೆ ಮೇಲೆ ಮುಂದಿನ ನೂರು-ಇನ್ನೂರು ವರ್ಷಗಳಲ್ಲಿ ಯಾರಾದರೂ ಭಗವಾ ಧ್ವಜ ಹಾರಿಸಬಹುದು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದರು. ಈಶ್ವರಪ್ಪ ಅವರ ಈ ಹೇಳಿಕೆ ವಿರುದ್ಧ ನವದೆಹಲಿಯ ಠಾಣೆಯೊಂದರಲ್ಲಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ನಾನು ಕಾನೂನು ವಿರುದ್ಧವಾಗಿ ಮಾತನಾಡಿಲ್ಲ. ಅವರ ಹೆಸರು ಪೇಪರ್-ಟಿವಿಗಳಲ್ಲಿ ಬರಬೇಕು ಎಂದು ನನ್ನ ಮೇಲೆ ದೂರು ಕೊಟ್ಟಿದ್ದಾರೆ. ನಾನು ಇಂಥ ನೂರು ಕೇಸು ಹಾಕಿದರೂ ಎಲ್ಲವನ್ನೂ ಎದುರಿಸುತ್ತೇನೆ. ಪುಗಸಟ್ಟೆ ಬಂಧಿಸಲು ನಾನು ಕುರಿ-ಕೋಳಿ ಅಲ್ಲ. ಹಾಗೆ ಮಾಡಿದರೆ ಅದು ಪ್ರಜಾಪ್ರಭುತ್ವ ಅಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
PublicNext
02/06/2022 08:33 am