ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುವರ್ಣಸೌಧದ ಮುಂದೆ ಶಾವಿಗೆ ಒಣಹಾಕಿದ ದಿನಗೂಲಿ ಮಹಿಳೆ ಕೆಲಸದಿಂದ ವಜಾ

ಬೆಳಗಾವಿ: ಸುವರ್ಣಸೌಧದ ಮುಂದೆ ಶಾವಿಗೆ ಒಣಹಾಕಿದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹೌದು ಮಹಿಳೆಯೋರ್ವಳು ಸುವರ್ಣಸೌಧದ ಮುಂದೆ ಶಾವಿಗೆ ಒಣಹಾಕಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ದಿನಗೂಲಿ ನೌಕರಿ ಮಾಡುತ್ತಿದ್ದ ಮಲ್ಲವ್ವ ಕೆಲಸ ಕಳೆದುಕೊಂಡಿದ್ದಾಳೆ.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಲಸದಿಂದ ವಜಾಗೊಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋಗಳು ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನರು ಟೀಕೆ ಟಿಪ್ಪಣಿ ಮಾಡಿದ್ದಾರೆ. ಚಳಿಗಾಲ ಅಧಿವೇಶನಕ್ಕಾಗಿ ತಯಾರಿ ನಡೆಸುವ ಮುಂಚಿತವಾಗಿಯೇ ಸಂಡಿಗೆ, ಹಪ್ಪಳ ಒಣಗಿಸಲಾಗುತ್ತಿದೆ ಎಂದು ಕೆಲವರು ಹಾಸ್ಯಮಯವಾಗಿ ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಸರ್ಕಾರ ಇಲ್ಲಿ ಸಂಡಿಗೆ, ಹಪ್ಪಳ ಮೇಳ ಹಮ್ಮಿಕೊಳ್ಳಲಿದೆ ಎಂದು ಕಮೆಂಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

01/06/2022 03:30 pm

Cinque Terre

34.65 K

Cinque Terre

1

ಸಂಬಂಧಿತ ಸುದ್ದಿ