ನವದೆಹಲಿ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಹಮ್ಮಿಕೊಂಡಿರುವ 'ಗರೀಬ್ ಕಲ್ಯಾಣ್ ಸಮ್ಮೇಳನ'ಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 11ನೇ ಕಂತಿನ ಆರ್ಥಿಕ ಪ್ರಯೋಜನವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, '2014ಕ್ಕೂ ಮುನ್ನ ಭ್ರಷ್ಟಾಚಾರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿತ್ತು. 2014ರ ಮೊದಲು, ಸರ್ಕಾರವು ಭ್ರಷ್ಟಾಚಾರವನ್ನು ವ್ಯವಸ್ಥೆಯ ಅತ್ಯಗತ್ಯ ಭಾಗವೆಂದು ಪರಿಗಣಿಸಿತ್ತು. ಆಗ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು ಸರ್ಕಾರ ಅದಕ್ಕೆ ಮಣಿದಿತ್ತು. ಆಗ ದೇಶವು ಯೋಜನೆಗಳ ಹಣವನ್ನು ನಿರ್ಗತಿಕರಿಗೆ ತಲುಪುವ ಮೊದಲು ಲೂಟಿ ಮಾಡುವುದು ಹೇಗೆಂದು ನೋಡುತ್ತಿತ್ತು. ಆದರೆ ನಿಮ್ಮ ಸರ್ಕಾರ ಇನ್ನು ಮುಂದೆ ಯಜಮಾನನಲ್ಲ, ನಿಮ್ಮ ಸೇವಕವಾಗಿರುತ್ತದೆ. ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಗಳಿಂದ ನಮ್ಮ ಯೋಜನೆಗಳು ಜನರಿಗಾಗಿ ಸರ್ಕಾರದ ಅರ್ಥವನ್ನು ಬದಲಾಯಿಸಿವೆ. ಈಗ ಸರ್ಕಾರ ಯಜಮಾನನಲ್ಲ, ಸೇವಕನಾಗಿರುತ್ತದೆ' ಎಂದು ಹೇಳಿದ್ದಾರೆ.
PublicNext
31/05/2022 04:14 pm