ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಈಗ RSS ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಹಿಂದೂಗಳೆಲ್ಲ ಒಂದು ಅನ್ನೋ ನಿಮ್ಮ ಪದಾಧಿಕಾರ ಯಾಕೆ ಒಂದೇ ಜಾತಿಗೆ ಸೀಮಿತ ಅಂತಲೇ ಪ್ರಶ್ನೆ ಕೇಳಿದ್ದಾರೆ.
ಸರಣಿ ಟ್ವಿಟ್ ಮೂಲಕ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿರೋ ಸಿದ್ದರಾಮಯ್ಯ, ನಿಮ್ಮ ಸಂಘದಲ್ಲಿ ಯಾಕೆ ಒಂದೇ ಜಾತಿಯವರಿದ್ದಾರೆ. ಹಿಂದುಳಿದವರು,ದಲಿತರು ಸೇರಿದಂತೆ ಬೇರೆ ಜಾತಿಯವರು ಯಾಕ್ ಇಲ್ಲ ಅಂತಲೇ ಸಿದ್ದು ಕೇಳಿದ್ದಾರೆ.
ಇಂತಹ ಒಂದು ಸರಳ ಪ್ರಶ್ನೆಗೆ RSS ಬಳಿ ಉತ್ತರವೇ ಇಲ್ಲ. ಇದು ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ ಅಂತಲೂ ಸಿದ್ದರಾಮಯ್ಯ ಚುಚ್ಚಿದ್ದಾರೆ.
PublicNext
31/05/2022 02:48 pm