ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋನಿಯಾ ಗಾಂಧಿ ಜತೆಗೆ ದೊಡ್ಡಗೌಡರು ಮಾತನಾಡಿದ್ದೇಕೆ ?

ಬೆಂಗಳೂರು: ರಾಜ್ಯ ಸಭೆ ಚುನಾವಣೆ ಹಿನ್ನೆಲೆಯಲ್ಲಿಯೇ ದೇವೇಗೌಡರು ಈಗಾಗಲೇ ಸೋನಿಯಾ ಗಾಂಧಿ ಅವರೊಟ್ಟಿಗೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ನಮ್ಮ ಬಳಿ 32 ಮತಗಳಿವೆ. ಎರಡು ರಾಷ್ಟ್ರೀಯ ಪಕ್ಷಗಳೂ ಇವೆ. ಇದರಲ್ಲಿ ಒಂದು ಕೋಮುವಾದಿ ಪಕ್ಷ. ಮತ್ತೊಂದು ಕೋಮುವಾದ ವಿರೋಧಿಸೋ ಪಕ್ಷ. ಆದರೆ, ನಮ್ಮ ಪಕ್ಷದಿಂದ ಕುಪೇಂದ್ರ ರೆಡ್ಡಿ ಅವರನ್ನ ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿಗೆ ಬೆಂಬಲಿಸುವಂತೆ ಸೋನಿಯಾ ಗಾಂಧಿ ಜೊತೆ ಮಾತನಾಡಿದ್ದೇವೆ ಎಂದಿದ್ದಾರೆ ರೇವಣ್ಣ.

ಈಗಾಗಲೇ ಕುಪೇಂದ್ರ ರೆಡ್ಡಿ ಕೂಡ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಆಗಿದ್ದಾರೆ.ರಾಮಲಿಂಗಾ ರೆಡ್ಡಿ ಅವರನ್ನೂ ಮೀಟ್ ಆಗಿದ್ದೇವೆ. ಆದರೆ, ಹೆಚ್ಚಿನ ಮನ ಇಲ್ಲದೇ ಇದ್ದರೂ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನ ಹಾಕಿದೆ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

31/05/2022 02:02 pm

Cinque Terre

26.54 K

Cinque Terre

1

ಸಂಬಂಧಿತ ಸುದ್ದಿ