ಇಸ್ಲಾಮಾಬಾದ್: ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಭೀಕರ ಸಂಘರ್ಷವೇ ನಡೆಯುತ್ತಿತ್ತು.ಒಂದು ವೇಳೆ ನಮ್ಮ ಪಕ್ಷದ ಆಜಾದಿ ಮೆರವಣಿಗೆ ನಿಲ್ಲಿಸದೇ ಇದಿದ್ದರೇ ಅಂದು ರಕ್ತಪಾತವೇ ಆಗಿ ಬಿಡುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ ಹೇಳಿಕೊಂಡಿದ್ದಾರೆ.
ಕಳೆದ ಮೇ-25 ರಂದು ಪಿಟಿಐ ಪಕ್ಷದ ಕಾರ್ಯಕರ್ತರು "ಆಜಾದಿ ಮೆರವಣಿಗೆ" ಮೂಲಕ ಇಸ್ಲಾಮಾಬಾದ್ ಗೆ ಮುತ್ತಿಗೆ ಹಾಕಬೇಕಿತ್ತು. ಆದರೆ, ಇಮ್ರಾನ್ ಖಾನ್ ಈ ಮೆರವಣಿಗೆಯನ್ನ ದಿಢೀರನೆ ಕ್ಯಾನ್ಸಲ್ ಮಾಡಿ ಬಿಟ್ಟರು.
ಈ ಕಾರಣಕ್ಕೇನೆ ಇಮ್ರಾನ್ ಖಾನ್, ಈ ಬಗ್ಗೆ ಈಗ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಂದು ವೇಳೆ ಅಂದು ಆಜಾದಿ ಮೆರವಣಿಗೆ ನಿಲ್ಲಿಸದೇ ಹೋಗಿದ್ದರೆ, ನಿಜಕ್ಕೂ ಇಸ್ಲಾಮಾಬಾದ್‌ನಲ್ಲಿ ರಕ್ತಪಾತವೇ ಆಗುತ್ತಿತ್ತು ಅಂತಲೇ ಇಮ್ರಾನ್ ಖಾನ್ ವಿವರಿಸಿದ್ದಾರೆ.
PublicNext
31/05/2022 11:14 am