ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋನಿಯಾ ಗಾಂಧಿ ಮೇಲೆ ಸಿಟ್ಟಿಗೆದ್ದ ನಟಿ ನಗ್ಮಾ: ಕಾರಣವೇನು?

ಮುಂಬೈ: ರಾಜ್ಯಸಭೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ತಮಗೆ ಟಿಕೆಟ್ ಸಿಗದ ಕಾರಣಕ್ಕೆ ಬಹುಭಾಷಾ ನಟಿ ನಗ್ಮಾ ಸೋನಿಯಾ ಗಾಂಧಿ ಮೇಲೆ ಸಿಡುಕಿದ್ದಾರೆ. ಅವರ ಬದಲಾಗಿ ಇಮ್ರಾನ್ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿದ ಘೋಷಿಸಿದೆ. ಹೀಗಾಗಿ ಆಕ್ರೋಶಗೊಂಡಿರುವ ನಗ್ಮಾ. ನನಗೆ ಇಮ್ರಾನ್ ಅವರಿಗಿಂತ ಕಡಿಮೆ ಅರ್ಹತೆ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

ಜೂನ್ 10ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಭಾನುವಾರ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬೆನ್ನಲ್ಲೇ ಈಗ ಕೈ ಪಾಳಯದಲ್ಲಿ ಅಸಮಾಧಾನ ಭುಗೆಲೆದ್ದಿದೆ. ನಟಿ ಮತ್ತು ರಾಜಕಾರಣಿ ನಗ್ಮಾ ಅವರು ಸಂಸತ್ತಿನ ಮೇಲ್ಮನೆಯಲ್ಲಿ ಸ್ಥಾನ ಸಿಗದಿರುವ ಬಗ್ಗೆ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕಿರುವ ನಗ್ಮಾ, 'ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ, 2003/04 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ಅವರ ಆದೇಶದ ಮೇರೆಗೆ ನನಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ಬದ್ಧರಾಗಿದ್ದರು. ಆಗ ನಾವು ಅಧಿಕಾರದಲ್ಲಿ ಇರಲಿಲ್ಲ. ಅಂದಿನಿಂದ 18 ವರ್ಷಗಳು ಕಳೆದಿವೆ, ಅವರು ಒಂದು ಅವಕಾಶವನ್ನೂ ಹುಡುಕಲಿಲ್ಲ. ಇಮ್ರಾನ್ ಅವರು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಸ್ಪರ್ಧಿಸ್ತಿದ್ದಾರೆ. ನಾನು ಅವರಿಗಿಂತ ಕಡಿಮೆ ಅರ್ಹಳಾ? ಎಂದು ನಟಿ ನಗ್ಮಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Edited By : Nagaraj Tulugeri
PublicNext

PublicNext

31/05/2022 07:29 am

Cinque Terre

29.82 K

Cinque Terre

7

ಸಂಬಂಧಿತ ಸುದ್ದಿ