ಬಟಿಂಡಾ: ಕಾಂಗ್ರೆಸ್ ಲೀಡರ್ ಹಾಗೂ ಗಾಯಕ ಶುಭದೀಪ್ ಸಿಂಗ್ ಸಿಧು ಭಾನುವಾರ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಸಾವನೊಪ್ಪಿದ್ದಾರೆ.ಮಾನ್ಸಾ ಜಿಲ್ಲೆಯ ಜವಾಹರ್ಕೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ದಾಳಿ ನಡೆದ ಕೂಡಲೇ ಮಾನ್ಸಾದಲ್ಲಿರೋ ಸಿವಿಲ್ ಆಸ್ಪತ್ರೆಗೂ ತೆಗೆದುಕೊಂಡು ಹೋಗಲಾಗಿದೆ. ಆದರೆ, ಸಿಂಗರ್ ಶುಭದೀಪ್ ಸಿಂಗ್ ಸಿಧು ಮೃತಪಟ್ಟಿದ್ದಾರೆಂದು ಆಸ್ಪತ್ರೆಯಲ್ಲಿ ಡಿಕ್ಲೆರ್ ಮಾಡಲಾಗಿದೆ. ಜೊತೆಗಿದ್ದ ಇಬ್ಬರ ಸ್ಥಿತಿ ಗಂಭೀರವಾಗಿಯೇ ಇದೆ.
ಗಾಯಕ ಶುಭದೀಪ್ ಸಿಂಗ್ ಸಿಧು ಮೂಸೆ ವಾಲಾ ತಮ್ಮ ಊರು ಮೂಸಾದಿಂದ ಅದ್ಯಾರನ್ನೋ ಮೀಟ್ ಆಗಲು Mahindra Tha ವಾಹನವನ್ನ ಡ್ರೈವ್ ಮಾಡಿಕೊಂಡು ಬರ್ತಾ ಇದ್ದರು. ಸ್ನೇಹಿತರೂ ಶುಭದೀಪ್ ಜೊತೆಗೆ ಇದ್ದರು.
ಆಗಲೇ ಗುಂಡಿನ ದಾಳಿ ಆಗಿದೆ.
ಶುಭದೀಪ್ ಸಿಂಗ್ ಹತ್ಯೆ ಹಿನ್ನೆಲೆಯಲ್ಲಿಯೇ ಈಗ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದು, ಪಂಜಾಬ್ ರಾಜ್ಯದ ಸಿಎಂ ಭಗವಂತ್ ಮಾನ್ ವಿರುದ್ಧ ಕಾಂಗ್ರೆಸ್‌ನವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
PublicNext
29/05/2022 07:38 pm