ಬೆಂಗಳೂರು: ಆಮ್ ಆದ್ಮಿ ಪಕ್ಷ ಬಿಬಿಎಂಪಿ ಚುನಾವಣೆಯಗೆ ಭಾರಿ ಸಿದ್ಧತೆ ಮಾಡಿಕೊಂಡಿದೆ. ಮನೆ ಮನೆಗೆ ಕೇಜ್ರಿವಾಲ್ ಮಾದರಿಯಲ್ಲಿಯೇ ಪ್ರಚಾರ ಮಾಡೊಕೆ ಮುಂದಾಗಿದೆ. ಈ ಮೂಲಕ ಪಕ್ಷದ ಸಾಧನೆಯನ್ನೂ ಜನರಿಗೆ ತಿಳಿಸಲಾಗುವುದು ಎಂದು ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.ಬೆಂಗಳೂರಿನ ಸಮಸ್ಯೆಗೆ ಪರಿಹಾಣ ಸಾಧ್ಯವಾಗೋದು ಕೇವಲ ಆಮ್ ಆದ್ಮಿ ಪಕ್ಷದಿಂದಲೇ ಸಾಧ್ಯ ಎಂದು ತಿಳಿಸಿದರು.
ಶೇಕಡ 40% ಹಣ ಕೊಳ್ಳೆ ಹೊಡೆಯುವ ಬಿಜೆಪಿಯಿಂದ ಗುಣಮಟ್ಟದ ಮೂಲಸೌಕರ್ಯ ಸಾಧ್ಯವಿಲ್ಲ ಎಂದು ಪೃಥ್ವಿ ರೆಡ್ಡಿ ವಿವರಿಸಿದ್ದಾರೆ.
PublicNext
29/05/2022 02:43 pm