ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವ್ರು RSS ನವರು ಮೂಲತಃ ಭಾರತದವ್ರೇನಾ ? ಎಂದು ಈಗ ಪ್ರಶ್ನೆ ಮಾಡಿದ್ದಾರೆ.
ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ಮೋದಿಯನ್ನ ನೆಹರುಗೆ ಹೋಲಿಸೋದು ಎಷ್ಟು ಸರಿ. ನೆಹರು ಎಲ್ಲಿ,ಮೋದಿ ಇನ್ನೆಲ್ಲಿ. ಆಕಾಶ-ಭೂಮಿಯ ಅಂತರವೇ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೆಹರು ಸಾಧನೆಯನ್ ಅಳಿಸಿ ಹಾಕೋ ಕೆಲಸ ಮಾಡಲಾಗುತ್ತಿದೆ.ಈಗಾಗಲೇ ಪಂಚವಾರ್ಷಿಕ ಯೋಜನೆಯನ್ನ ತೆಗೆದುಹಾಕಿದ್ದಾರೆ. ಆ ಜಾಗದಲ್ಲಿಯೇ ನೀತಿ ಆಯೋಗ ತಂದಿದ್ದಾರೆ. ದುರಂತ ಅಂದ್ರೆ ನೀತಿ ಆಯೋಗ ಸರ್ಕಾರದ ಕೈಗೊಂಬೆ ಆಗಿದೆ ಅಂತಲೂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಕೈಯಲ್ಲಿ ಪುಸ್ತಕ ಪರಿಷ್ಕರಣೆ ಕೊಟ್ಟರೆ ಏನ್ ಆಗುತ್ತದೆ. ಈತ ಹೆಡ್ಗೇವಾರ್ ಗಿಂತ ಒಂದು ಹೆಜ್ಜೆ ಮುಂದೇನೆ ಇದ್ದಾನೆ. ಈತ ಹಳೆಯದನ್ನೆಲ್ಲ ಕೆದಕುತ್ತಿದ್ದಾನೆ. ಹಾಗಾದ್ರೆ ಇವರು ಮೂಲ ಭಾರತದವ್ರಾ ? RSS ನವರೂ ಮೂಲ ಭಾರತದವರೇನಾ ಅಂತಲೂ ಸಿದ್ದಾರಾಮಯ್ಯ ಪ್ರಶ್ನೆ ಮಾಡೋ ಮೂಲಕ ಟೀಕಿಸಿದ್ದಾರೆ.
PublicNext
27/05/2022 01:54 pm