ಚೆನ್ನೈ: ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನ ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ತನ್ನ 20 ವರ್ಷ ಪೂರೈಸಿದ ಸಂಭ್ರವನ್ನ ಆಚರಿಸಿದೆ. ಇದೇ ಕಾರ್ಯಕ್ರಮದಲ್ಲಿಯೇ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಬನಾರಸ್‌ನ ಹಿಂದೂ ವಿಶ್ವವಿದ್ಯಾಲಯದಲ್ಲಿ ತಮಿಳು ಅಧ್ಯಯನ ವಿಭಾಗ ಇದೆ. ಇದು ನನ್ನಗೆ ತುಂಬಾ ವಿಶೇಷವಾಗಿಯೇ ಇದೆ ಅಂತಲೂ ಮೋದಿ ಹೇಳಿಕೊಂಡಿದ್ದಾರೆ.
ಈ ಒಂದು ಅಧ್ಯಯನ ವಿಭಾಗವು ಎನ್‌ಇಪಿ ಭಾರತೀಯ ಭಾಷೆಗಳನ್ನ ಉತ್ತೇಜಿಸಲು ವಿಶೇಷ ಪ್ರಾಮುಖ್ಯತೆ ನೀಡುತ್ತದೆ ಅಂತಲೂ ವಿವರಿಸಿದ್ದಾರೆ ಮೋದಿ. ಹಾಗೇನೆ ತಮಿಳು ಭಾಷೆ ಹಾಗೂ ತಮಿಳು ಸಂಸ್ಕೃತಿ ಜನಪ್ರಿಯಗೊಳಿಸಲು ಸರ್ಕಾರವೂ ಬದ್ದವಾಗಿಯೇ ಇದೆ ಅಂತಲೇ ಮೋದಿ ಇಲ್ಲಿ ತಿಳಿಸಿದ್ದಾರೆ.
PublicNext
26/05/2022 08:57 pm