ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ಯಾರೀ ಈತ ಅಂತಲೂ ಪ್ರಶ್ನೆ ಮಾಡಿದ್ದಾರೆ.
ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದು, ಇವನನ್ನ ಒದ್ದು ಒಳಗೆ ಹಾಕಬೇಕು ಅಂತಲೂ ಕಿಡಿಕಾರಿದ್ದಾರೆ ಎಚ್‌ಡಿಕೆ. ಏನ್ ಈತನ ಹಿನ್ನೆಲೆ ಅಂತಲೂ ಪ್ರಶ್ನೆ ಮಾಡಿದ್ದಾರೆ.
ರೋಹಿತ್ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿದ್ದು,ಈ ವ್ಯಕ್ತಿ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನ ರದ್ದುಗೊಳಿಸಬೇಕು, ಈಗಾಗಲೇ ಗೊಂದಲ ಉಂಟಾದ ಪಠ್ಯಗಳನ್ನ ಜಾರಿಗೆ ತರದೇ ಈ ಹಿಂದಿನ ಪಠ್ಯಗಳನ್ನೆ ಮುಂದುವರೆಸಬೇಕು ಎಂದು ಈಗಾಗಲೇ ಶಿಕ್ಷಣ ತಜ್ಞರು ಸರ್ಕಾರವನ್ನ ಒತ್ತಾಯಿಸಿದ್ದಾರೆ ಎಂದರು.
PublicNext
26/05/2022 04:34 pm