ಮುಂಬೈ: ಮಹಾರಾಷ್ಟçದ ಬಿಜೆಪಿ ನಾಯಕ ಚಂದ್ರಕಾoತ್ ಪಾಟೀಲ್ ಕೊಟ್ಟ ಆ ಒಂದು ಹೇಳಿಕೆಯ ಈಗ ಭಾರೀ ವಿವಾದ ಸೃಷ್ಟಿಸಿದ್ದು, ರಾಜಕೀಯ ಗೊತ್ತಿಲ್ಲ ಅಂದ್ರೆ ಮನೆಗೆ ಹೋಗಿ ಅಡುಗೆ ಮಾಡಿ ಅಂತಲೇ ಕಾಮೆಂಟ್ ಮಾಡಿದ್ದಾರೆ. ಈ ಒಂದು ಹೇಳಿಕೆ ಹಿನ್ನೆಲೆಯಲ್ಲಿಯೇ ಮಹಿಳಾ ಸಮುದಾಯ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಹೌದು. ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಸಂಸದೆ ಸುಪ್ರಿಯಾ ವಿರುದ್ಧ ಚಂದ್ರಕಾAತ್ ಪಾಟೀಲ್ ಹೀಗೆ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಸುಪ್ರಿಯಾ ಮೊನ್ನೆ ಪಕ್ಷದ ಸಭೆಯಲ್ಲಿ ಒಬಿಸಿ ಬಗ್ಗೆ ಮಾತನಾಡಿದ್ದರು. ಬಿಜೆಪಿಯ ಆಡಳಿತ ಇರೋ ಮಧ್ಯ ಪ್ರದೇಶವು ಒಬಿಸಿಗೆ ಸಂಬAಧಿಸಿದAತೆ ಸುಪ್ರೀಂ ಕೋರ್ಟ್ನಿಂದ ಅದ್ಹೇಗೆ ಪರಿಹಾರ ಪಡೆದುಕೊಂಡಿತು ಅಂತಲೇ ಸುಪ್ರಿಯಾ ಪ್ರಶ್ನೆ ಮಾಡಿದ್ದರು.
ಈ ಒಂದು ಹೇಳಿಕೆಹ ಹಿನ್ನೆಲೆಯಲ್ಲಿಯೇ ಚಂದ್ರಕಾAತ್ ಪಾಟೀಲ್ ರೊಚ್ಚಿಗೆದ್ದಿದ್ದಾರೆ. ರಾಜಕೀಯ ಗೊತ್ತಿಲ್ಲ ಅಂದ್ರೆ ಮನೆಗೆ ಹೋಗಿ ಅಡುಗೆ ಮಾಡಿ ಅಂತಲೇ ಕಾಮೆಂಟ್ ಮಾಡಿದ್ದಾರೆ.
PublicNext
26/05/2022 02:56 pm