ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

#GoBackModi Twitter ನಲ್ಲಿ ಏಕೆ ಟ್ರೆಂಡಿಂಗ್ ಆಗುತ್ತಿದೆ?

ಚೆನ್ನೈ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದು, ಟ್ವಿಟರ್ ನಲ್ಲಿ #GoBackModi ಟ್ರೆಂಡಿಂಗ್ ಆಗಿದೆ. ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗಾಗಿ ಪ್ರಧಾನಿ ಗುರುವಾರ ಚೆನ್ನೈ ಆಗಮಿಸಲಿದ್ದಾರೆ. ಇನ್ನು ಪ್ರಧಾನಿಗಳಿಗಾಗಿ ಐದು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಇದರ ಮಧ್ಯೆ ಟ್ವೀಟರ್ ನಲ್ಲಿ #GoBackModi ಟ್ರೆಂಡ್ ಶುರುವಾಗಿದ್ದು, ಇದು ಭಾರತದಲ್ಲಿ ಟಾಪ್ ಟ್ರೆಂಡ್ ಆಗಿದೆ.

ಮೋದಿಯವರ ರಾಜ್ಯ ಭೇಟಿಗೆ ಪ್ರತಿಕ್ರಿಯೆಯಾಗಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಬಿಜೆಪಿಯ ಸಿದ್ಧಾಂತ, ಬೆಲೆ ಏರಿಕೆ, ಇಂಧನ ದರಗಳು, ಹಿಂದಿ ಭಾಷಾ ವಿವಾದ, ಉದ್ಯಮಿಗಳನ್ನು ಬೆಂಬಲಿಸುವ ಆರೋಪಗಳು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಟ್ವಿಟರ್ ನಲ್ಲಿ ಮೋದಿ ವಿರುದ್ಧ ಜನ ಕೋಪಗೊಂಡಿದ್ದಾರೆ.

ತಮಿಳುನಾಡಿನ ಐದು ರೈಲು ನಿಲ್ದಾಣಗಳಾದ ಚೆನ್ನೈ ಎಗ್ಮೋರ್, ರಾಮೇಶ್ವರಂ, ಮಧುರೈ, ಕಟ್ಪಾಡಿ ಮತ್ತು ಕನ್ಯಾಕುಮಾರಿಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

1,800 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆ ಪೂರ್ಣಗೊಳ್ಳಲಿದೆ. ಆಧುನಿಕ ಸೌಕರ್ಯಗಳ ಮೂಲಕ ಪ್ರಯಾಣಿಕರ ಅನುಕೂಲ ಮತ್ತು ಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

26/05/2022 01:05 pm

Cinque Terre

87.23 K

Cinque Terre

20

ಸಂಬಂಧಿತ ಸುದ್ದಿ