ಪಟ್ನಾ: ನಮ್ಮ ಕಾಲದ ಕಾಲೇಜುಗಳಲ್ಲಿ ಹುಡುಗಿಯರೇ ಇರುತ್ತಿರಲಿಲ್ಲ. ಹುಡುಗಿಯರಿಲ್ಲದ ಕಾಲೇಜನ್ನು ನೋಡಲು ತುಂಬ ಕೆಟ್ಟದಾಗಿ ಇರುತ್ತಿತ್ತು. ಹುಡುಗಿಯರಿಲ್ಲದ ಕಾರಣಕ್ಕೆ ಬೋರ್ ಆಗುತ್ತಿತ್ತು ಎಂದು ಬಿಹಾರ ಸಿಎಂ ನಿತೀಶ್‌ಕುಮಾರ್ ಯಾದವ್ ಹೇಳಿದ್ದಾರೆ.
ಪಾಟ್ನಾದಲ್ಲಿ ನಿರ್ಮಿಸಲಾದ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಆಗಿನ ಕಾಲದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಎಂದರೆ ಬರೇ ಹುಡುಗರೇ ಇರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಎಷ್ಟೊಂದು ಹುಡುಗಿಯರು ಇಂದು ಇಂಜಿನಿಯರಿಂಗ್, ಮೆಡಿಕಲ್, ಉನ್ನತ ಶಿಕ್ಷಣ ಓದುತ್ತಿದ್ದಾರೆ ಎಂದು ನಿತೀಶ್‌ಕುಮಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
PublicNext
25/05/2022 10:22 pm