ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿಯ 'ಲಕ್ಷ್ಮೀ ಜಪ' ಮಾಡೋದು ಮಹಿಳಾ ಸಬಲೀಕರಣವೇ?: ಡಿಕೆಶಿಗೆ ಬಿಜೆಪಿ ಪ್ರಶ್ನೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳಿಸುತ್ತಿದ್ದಂತೆಯೇ ಅಸಮಾಧಾನ ಭುಗಿಲೆದ್ದಿದೆ. ಒಟ್ಟು ಅಭ್ಯರ್ಥಿಗಳಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಸ್ಥಾನ ಕೊಟ್ಟಿಲ್ಲ. ಇದು ಸ್ವಪಕ್ಷದಲ್ಲೇ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಖಾರವಾಗಿ ಪ್ರಶ್ನಿಸಿರುವ ರಾಜ್ಯ ಬಿಜೆಪಿ ಕೇವಲ ಲಕ್ಷ್ಮಿ ಜಪ ಮಾಡೋದಷ್ಟೇ ಮಹಿಳಾ ಸಬಲೀಕರಣವೇ ಎಂದು ವ್ಯಂಗ್ಯವಾಡಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಡಿಕೆಶಿ ಬಣಕ್ಕೆ ಮಹಿಳಾ ಸಬಲೀಕರಣ ಅಂದ್ರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ ಎಂದು ಕುಟುಕಿದೆ.

'ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಬೆಲೆಯೇ ಇಲ್ಲ. ಇವರಿಗೆ ಮಹಿಳೆಯರು ನೆನಪಾಗುವುದು, ಚುನಾವಣೆಯ ಸಂದರ್ಭದಲ್ಲಿ ಅಥವಾ ಪ್ರತಿಭಟನೆ ಮಾಡುವಾಗ ಮಾತ್ರ. ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ‌. ಪರಿಷತ್ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ. ಮಹಿಳಾ ಸಬಲೀಕರಣ ಬರೀ ಬೂಟಾಟಿಕೆಯೇ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

'ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ, ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ 'ಲಕ್ಷ್ಮಿ'ಗೆ ಮಾತ್ರ ಗೌರವ. ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್‌ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು?' 'ಉತ್ತರಪ್ರದೇಶ - ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ. ಕರ್ನಾಟಕ - ನಾ ನಾಯಕಿ ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನೂ ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೇ ಭಾಷಣಕ್ಕೆ ಸೀಮಿತವೇ? ಎಂದು ಬಿಜೆಪಿ ಪ್ರಶ್ನಿಸಿದೆ.

Edited By : Nagaraj Tulugeri
PublicNext

PublicNext

25/05/2022 08:01 pm

Cinque Terre

56.8 K

Cinque Terre

3

ಸಂಬಂಧಿತ ಸುದ್ದಿ