ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿರಾರು ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿರುವುದು ಸತ್ಯ: ಸಿ.ಟಿ ರವಿ

ನವದೆಹಲಿ: ಜ್ಞಾನವಾಪಿ ಮಸೀದಿ ಹಾಗೂ ಮಂಗಳೂರಿನ ಮಳಲಿ ಮಸೀದಿಯಂತೆ ಸಾವಿರಾರು ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿರುವುದು ಸತ್ಯ ಎ೦ದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಈಗಲೂ ಸವಾಲು ಹಾಕುತ್ತೇನೆ, ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಅಧ್ಯಯನ ನಡೆಸಲಿ. ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ. ಇದೀಗ ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ. ಈ ನೆಲದ ಕಾನೂನು ಅಂತಿಮ. ಆದರೆ ತಾಂಬೂಲ ಪ್ರಶ್ನೆ ನಂಬಿಕೆ ಇರುವವರು ಕೇಳಿದ್ದಾರೆ. ನಂಬಿಕೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ. ಕೆಲವರು ಹಿಡಿಯಾಗಿ ಸಿಗುವ ವೋಟಿಗಾಗಿ ಜೊಲ್ಲು ಸುರಿಸಿಕೊಂಡು ಹೋಗ್ತಾರೆ. ಸತ್ಯ ಗೊತ್ತಿದ್ದರೂ ವೋಟಿಗಾಗಿ ರಾಜಕೀಯ ಮಾಡುತ್ತಾರೆ. ನಾವು ವೋಟಿಗಾಗಿ ರಾಜಕೀಯ ಮಾಡಿಲ್ಲ ಎಂದು ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

25/05/2022 04:28 pm

Cinque Terre

84.97 K

Cinque Terre

14

ಸಂಬಂಧಿತ ಸುದ್ದಿ