ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಆದಷ್ಟು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು'

ಬೆಂಗಳೂರು: ರಾಜ್ಯದಲ್ಲಿ ಆದಷ್ಟು ಬೇಗ ಮಂಗಳಮುಖಿಯರ ಸರ್ಕಾರ ತೆಗೆಯಬೇಕು. ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರವಿದು. 2023ಕ್ಕೆ ಈ ಮಂಗಳಮುಖಿ ಸರ್ಕಾರ ತೆಗೆಯಬೇಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಜೊತೆಗೆ ಹೋರಾಡಲೂ ಆಗುವುದಿಲ್ಲ ಸುಮ್ಮನಿರಲೂ ಆಗುವುದಿಲ್ಲ. ಹೆಂಗಸರಾದರೆ ಹೆಂಗಸರ ಜೊತೆಗೆ ಕಳುಹಿಸಬಹುದು, ಗಂಡಸರಾದರೆ ಗಂಡಸರ ಜೊತೆ ಕಳುಹಿಸಬಹುದು. ಆದರೆ ಇವರು ಎರಡೂ ಅಲ್ಲ, ಭಾಷಾ ಅಂತ ಚಪ್ಪಾಳೆ ತಟ್ಟಿಬಿಡುತ್ತಾರೆ. ಏನಾದರೂ ಆರೋಪ ಮಾಡಿದರೆ ಕಿಸಿಕ್ ಎಂದು ನಗಾಡ್ತಾರೆ, ಏನು ಮಾಡೋಣ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ವಿಧಾನ ಪರಿಷ್ ಸ್ಥಾನಕ್ಕೆ ಟಿಕೆಟ್ ಸಿಗದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು. ಬಡಿಸೋ ಜಾಗದಲ್ಲಿ ಇದ್ದು ನಾವೇ ಊಟ ಮಾಡೋಕೆ ಕೂತರೆ ಹೆಂಗೆ ಎಂದು ಪ್ರಶ್ನಿಸಿದರು.

Edited By : Vijay Kumar
PublicNext

PublicNext

24/05/2022 03:28 pm

Cinque Terre

34.71 K

Cinque Terre

19

ಸಂಬಂಧಿತ ಸುದ್ದಿ