ಲಕ್ನೋ: ನಮ್ಮ ಸರ್ಕಾರ ಬಂದ ಮೇಲೆ ರಸ್ತೆಗಳಲ್ಲಿ ನಮಾಜ್ ಮಾಡುವುದು ನಿಂತಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆರ್ ಎಸ್ ಎಸ್ ನ ನಿಯತಕಾಲಿಕೆಗಳಾದ “ಪಾಂಚಜನ್ಯ’ ಮತ್ತು “ಆರ್ಗನೈಸರ್’ನ 75ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನ್ನಾಡಿದ ಅವರು,ಇದೇ ಮೊದಲನೇ ಬಾರಿಗೆ ಉತ್ತರ ಪ್ರದೇಶದಲ್ಲಿ ರಸ್ತೆಗಳ ಮೇಲೆ ಈದ್ ನಮಾಜ್ ನಡೆದಿಲ್ಲ ಎಂದು ಹೇಳಿದ್ದಾರೆ.
2012-17ರ ಅವಧಿಯಲ್ಲಿ ರಾಜ್ಯದಲ್ಲಿ 700ಕ್ಕೂ ಅಧಿಕ ಗಲಭೆಗಳಾಗಿವೆ. ಅನಂತರ ಒಂದೂ ಗಲಭೆಯಾಗಿಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ರಾಮನವಮಿ ದಿನ ಹೊಡೆದಾಟವಾದರೂ ನಮ್ಮಲ್ಲಿ ಆಗಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
PublicNext
23/05/2022 10:56 pm