ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಯರ್ ಸಿದ್ದರಾಮಯ್ಯ ಬೀಫ್ ಕುರಿತು ಕಾಂಗ್ರೆಸ್‌ನ ನಿಲುವು ಸ್ಪಷ್ಟಪಡಿಸಿದ್ದಾರೆ: ಬಿಜೆಪಿ ಕಿಡಿ

ಬೆಂಗಳೂರು: ಹಿಂದೂಗಳು ಕೂಡ ಬೀಫ್ ತಿನ್ನುತ್ತಾರೆ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿ ಕಿಡಿ ಕಾರಿದೆ.

ಲಾಯರ್ ಸಿದ್ದರಾಮಯ್ಯ ಅವರು ಗೋಮಾಂಸ ಭಕ್ಷಣೆ ಪರವಾಗಿ ಮಾತನಾಡಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟಪಡಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಕಿಡಿ ಕಾರಿದೆ‌.

ಅಹಿಂದದ ಸೂತ್ರ ಪಠಿಸುವ 'ಅಹಿಂದು' ಲಾಯರಿ ಸಿದ್ದರಾಮಯ್ಯ ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಪುಂಗುತ್ತಾರೆ. ಇವರು ಒಂದು ವಿಶೇಷ ಸಮುದಾಯವನ್ನು ಅಸಂವಿಧಾನಿಕ ರೀತಿಯಲ್ಲಿ ಓಲೈಸಿಕೊಂಡು ಬರುತ್ತಿರುವ ಕಾರಣವೇನು? ಎಂದು ಸ್ಪಷ್ಟ ಪಡಿಸಲೇಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ.

ಹಿಂದುಳಿದ ಮತ್ತು ದಲಿತ ವರ್ಗದ ಹಿಂದೂ ಸೋದರರೂ ಕೂಡ ಗೋವನ್ನು ಪೂಜಿಸುತ್ತಾರೆ. ಗೋಮಾಂಸ ತಿನ್ನಬೇಕು ಅನ್ನಿಸಿದರೆ ತಿನ್ನುವೆ ಎನ್ನುವ ನೀವು ಯಾವ ನೈತಿಕ ಮೌಲ್ಯದ ಮೇಲೆ ಕೋಟ್ಯಂತರ ಹಿಂದೂಗಳು ಆಸ್ಥೆಯಿಂದ ನಡೆದುಕೊಳ್ಳುವ ಮಠ ಮಂದಿರಗಳಿಗೆ ಹೋಗಿ ಬರುತ್ತೀರಿ? ಹೀಗೆ ಹಿಂದೂಗಳಿಗೆ ಅವಮಾನ ಮಾಡಿ ಕಡೆಗೆ ಅವರಲ್ಲಿಯೇ ಮತಭಿಕ್ಷೆ ಬೇಡುವುದು ನಾಚಿಕೆಗೇಡು ಎಂದು ರಾಜ್ಯ ಬಿಜೆಪಿ ಘಟಕ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದೆ.

Edited By : Nagaraj Tulugeri
PublicNext

PublicNext

23/05/2022 10:58 am

Cinque Terre

56.41 K

Cinque Terre

8

ಸಂಬಂಧಿತ ಸುದ್ದಿ