ಬೆಂಗಳೂರು: 'ಉಪಚುನಾವಣೆಯಲ್ಲಿ ಒಂದು ಸಾವಿರ ಜನ ಕಾರ್ಯಕರ್ತರು ಬಂದು ಐದೈದು, ಹತ್ತತ್ತು ಓಟ್ ಹಾಕಿದರು. ಆ ರೀತಿ ಪಕ್ಷ ಕಟ್ಟಿದ್ದಕ್ಕೆ ಇವತ್ತು 119 ವಿಧಾನಸಭಾ ಸದಸ್ಯರನ್ನು ಇಟ್ಕೊಂಡು ಸರಕಾರ ಮಾಡಿದ್ದೇವೆ' ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಮುನಿರಾಜು ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, 'ಏನಿದು ರಹಸ್ಯ? ಅಸಹ್ಯ?' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಶ್ನಿಸಿದ್ದಾರೆ.
'ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಟು ವರ್ಷದಿಂದ ಹಾಡಿದ ರಾಗವನ್ನೇ ರಾಜ್ಯ ಬಿಜೆಪಿ ನಾಯಕರು ಮೂರು ವರ್ಷದಿಂದ ಹಾಡುತ್ತಿದ್ದಾರೆ. ನೀವು ಅಧಿಕಾರಕ್ಕೆ ಬಂದು ಮಾಡಿದ್ದಾದರೂ ಏನು? ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘ಕಳೆದ ಬಾರಿ ಬಿಬಿಎಂಪಿ ಮೇಯರ್ ಆಗಿದ್ದವರು ಬಿಜೆಪಿಯವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಮೂರು ವರ್ಷ ತುಂಬುತ್ತಾ ಬಂತು. ನೀವೇ ತುಂಬಿಸಿರುವ ಶೇ.40ರಷ್ಟು ಕಮಿಷನ್ ಎಂಬ ಪಾಪದ ಕೊಡ ತಲೆ ಮೇಲಿಟ್ಟುಕೊಂಡು ನಮ್ಮನ್ನ ದೂರಿದ್ರೆ ಹೇಗಪ್ಪ ಆರ್.ಅಶೋಕ್?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
PublicNext
22/05/2022 04:38 pm