ಮೈಸೂರು: ಅಂತಾರಾಷ್ಟ್ರೀಯ ವಿಶ್ವ ಯೋಗದ ದಿನಾಚರಣೆ ಅಂಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬರುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಈ ವಿಷಯವನ್ನ ಟ್ವಿಟರ್ ಮೂಲಕ ಖಚಿತ ಪಡಿಸಿದ್ದಾರೆ.
ಜೂನ್-21 ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿ ಮೈಸೂರಿಗೆ ಬರುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲ ಖಚಿತ ಪಡಿಸಿದೆ.
ರಾಜ್ಯ ಸರ್ಕಾರಕ್ಕೂ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಪತ್ರ ಬರೆದು ತಿಳಿಸಿದೆ. ಈ ಹಿಂದೆ ಪ್ರತಾಪ್ ಸಿಂಹ ವಿಶ್ವ ಯೋಗ ದಿನದಂದು ಮೈಸೂರಿಗೆ ಆಹ್ವಾನಿಸುವಂತೆ ಆಮಂತ್ರಣ ನೀಡಿದ್ದರು.
PublicNext
21/05/2022 08:11 am