ಬೆಂಗಳೂರು:ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಿಢೀರನೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.ಬೊಮ್ಮಾಯಿ ಅವರ ಈ ಪ್ರವಾಸ ಈಗ ಕುತೂಹಲ ಹೆಚ್ಚಿಸಿದೆ.
ಪಕ್ಷದ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿಯೇ ಸಿಎಂ ಬೊಮ್ಮಾಯಿ ದೆಹಲಿಗೆ ಹೋಗ್ತಿದ್ದಾರೆ. ಆದರೆ, ಸದ್ಯ ಬೆಂಗಳೂರಿನಲ್ಲಿ ಮಳೆ ಇದ್ದು, ಇಲ್ಲಿಯ ಪರಿಸ್ಥಿತಿಯ್ನನೇ ಬೊಮ್ಮಾಯಿ ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಚೇರಿಯಿಂದ ದೂರವಾಣಿ ಕರೆ ಬಂದಿದೆ. ಈ ಕಾರಣಕ್ಕೇನೆ ಇಂದು ಮಧ್ಯಾಹ್ನವೇ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಬೊಮ್ಮಾಯಿ ಹಲವು ಬಾರಿ ದೆಹಲಿಗೆ ತೆರಳಿದ್ದರೂ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಣಚೆಗೆ ಅನುಮತಿ ಸಿಕ್ಕಿರಲಿಲ್ಲ. ಈ ಪ್ರವಾಸದಲ್ಲಿ ಅದು ಸಾಧ್ಯವಾಗುತ್ತದೆಯೇ ಅನ್ನೋ ಪ್ರಶ್ನೆನೂ ಈಗ ಎದ್ದಿದೆ.
PublicNext
20/05/2022 02:55 pm