ಬೆಂಗಳೂರು: ಸಿಲಿ ಕಾನ್ ಸಿಟಿ ಮಳೆಗೆ ತತ್ತರಿಸಿ ಹೋಗಿದೆ. ಜನರ ಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ ಹಾಳಾಗಿವೆ. ಅಪಾರ ಆಸ್ತಿ-ಪಾಸ್ತಿ ಹಾನಿ ಆಗಿದೆ. ಇಂತಹ ಪ್ರದೇಶಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಇವತ್ತು ಕೂಡ ಸಿಟಿ ರೌಂಡ್ಸ್ ಮಾಡಲಿದ್ದಾರೆ.
ನಿನ್ನೆ ಕೂಡ ಬೆಂಗಳೂರಿನ ಮಳೆ ಎಫೆಕ್ಟೆಡ್ ಪ್ರದೇಶಗಳಿಗೆ ಸಿಎಂ ಭೇಟಿಕೊಟ್ಟಿದ್ದರು. ಜನರ ನೋವುಗಳನ್ನ ಕೇಳಿದ್ದರು. ಇಂದು ಕೂಡ ಮಳೆ ಪೀಡಿತ ಪ್ರದೇಶಕ್ಕೆ ಭೇಟಿಕೊಡಲಿದ್ದಾರೆ.
ಬೆಳಗ್ಗೆ 9.30ಕ್ಕೆ ಕಚೇರಿ ಕೃಷ್ಣದಿಂದಲೇ ಸಿಎಂ ಬೊಮ್ಮಾಯಿ ಹೊರಡಲಿದ್ದಾರೆ. ಅಲ್ಲಿಂದ ಮೊದಲು ಮಹಾಲಕ್ಷ್ಮೀಪುರಂ ವಿಧಾನ ಸಭಾ ಕ್ಷೇತ್ರದಲ್ಲಿ ಪರಿಶೀಲನೆ ಮಾಡಲಿದ್ದಾರೆ. ಇದಾದ ಬಳಿಕ ಎಲ್ಲಿ ಮಳೆ ಹಾನಿ ಹೆಚ್ಚಾಗಿದಿಯೋ ಆಯಾ ಪ್ರದೇಶಕ್ಕೂ ಈ ಮೊದಲೇ ಪ್ಲಾನ್ ಆದಂತೆ ಎಲ್ಲೆಡೆ ಸಿಎಂ ಭೇಟಿಕೊಡಲಿದ್ದಾರೆ.
PublicNext
19/05/2022 09:04 am