ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ತೈಲ ಬೆಲೆ, ನಿರುದ್ಯೋಗ ಹಾಗೂ ಕೋಮು ಹಿಂಸಾಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಇಂದು ಗ್ರಾಫ್ ಕಾರ್ಡ್‌ವೊಂದನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಭಾರತ, ಶ್ರೀಲಂಕಾ ಆರ್ಥಿಸ್ಥಿತಿಗತಿಗಳನ್ನು ತೋರಿಸುವ ಅಂಕಿಅಂಶದ ಗ್ರಾಫ್‌ನೊಂದಿಗೆ ಜನರನ್ನು ವಿಚಲಿತಗೊಳಿಸುವುದರಿಂದ ಸತ್ಯಗಳು ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆಯೇ ಭಾಸವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಹಂಚಿಕೊಂಡ ಗ್ರಾಫ್‌ನಲ್ಲಿ ಶ್ರೀಲಂಕಾ ಹಾಗೂ ಭಾರತದ ನಡುವಿನ ತೈಲ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ ತುಲನಾತ್ಮಕ ಮಾಹಿತಿ ಇದೆ. ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಆಹಾರ ಉತ್ಪಾದನೆಯೂ ಸಮರ್ಪಕವಾಗಿ ಆಗದ ಕಾರಣ ಅದರ ಭದ್ರತೆಯೂ ಕುಸಿದಿದೆ. ಇದರಿಂದ ಅಲ್ಲಿನ ಪ್ರಜೆಗಳು ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಕರ್ಫ್ಯೂ ಹೇರುವ ಮೂಲಕ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
PublicNext
18/05/2022 09:18 pm