ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ದಲಿತ ನಾಯಕ ಸಿಎಂ ಆಗ್ತಾನೆ ಎಂಬ ಕನಸು ಕಾಣುವವನು ಹುಚ್ಚ'

ಬೆಂಗಳೂರು: ದಲಿತ ಸಿಎಂ ಕನಸು ಕಾಣುವವನು ಹುಚ್ಚ. ದಲಿತ ಮುಖ್ಯಮಂತ್ರಿ ಕೂಗಿಗೆ ಯಾವ ರಾಜಕೀಯ ಪಕ್ಷವೂ ಸ್ಪಂದನೆ ನೀಡುವುದಿಲ್ಲ. ರಾಜಕಾರಣದ ತೆವಲಿಗೆ ಇಂತಹ ಚರ್ಚೆ ಮಾಡುತ್ತಾರೆ. ರಾಜ್ಯದಲ್ಲಿ ಯಾವ ಕಾಲಕ್ಕೂ ದಲಿತ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಆನೇಕಲ್ ಪಟ್ಟಣದ ಗುಡ್ನಹಳ್ಳಿ ಗ್ರಾಮದಲ್ಲಿರುವ ಸಾಯಿರಾಮ್ ಕಾಲೇಜಿನಲ್ಲಿ 21ನೇ ಘಟಿಕೋತ್ಸವ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಕನಸು ಕಾಣುವವನು ಹುಚ್ಚ. ಅದಕ್ಕೆ ಇತಿಹಾಸದಲ್ಲಿ ಹಲವು ಉದಾಹರಣೆಗಳಿವೆ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಐದು ವರ್ಷ ಮಂತ್ರಿಯಾಗಲು ಯಾವ ರಾಜಕೀಯ ಪಕ್ಷಗಳು ಬೆಂಬಲ ನೀಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು 9 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಹಲವು ಬಾರಿ ಶಾಸಕರಾಗಿದ್ದರು. ಬೇಕಂತಲೇ ಅವರನ್ನು ಮುಖ್ಯಮಂತ್ರಿ ಮಾಡಲು ಬಿಡಲಿಲ್ಲ. ರಾಜಕಾರಣದಲ್ಲಿ ಅವರನ್ನು ಬೇಕಂತಲೇ ಸೋಲಿಸಿದರು. ಕಾಂಗ್ರೆಸ್‌ನಲ್ಲಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಆಗಲು‌ ಬಿಡದೇ ಸೋಲಿಸಿದರು. ಇಂತಹ ಕೆಟ್ಟ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚ. ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.

Edited By : Manjunath H D
PublicNext

PublicNext

15/05/2022 05:24 pm

Cinque Terre

36.5 K

Cinque Terre

9

ಸಂಬಂಧಿತ ಸುದ್ದಿ