ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಹೋರಾಟದ ನೇತೃತ್ವ ವಹಿಸಿದ್ದ ಹಿರಿಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಅವರನ್ನು ಭಾರತೀಯ ಕಿಸಾನ್ ಒಕ್ಕೂಟದಿಂದ ಹೊರಹಾಕಲಾಗಿದೆ. ಅಷ್ಟೇ ಅಲ್ಲದೆ ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದಲೂ ತನ್ನ ಸಹೋದರ ನರೇಶ್ ಟಿಕಾಯತ್ ಅವರನ್ನು ತೆಗೆದು ಹಾಕಲಾಗಿದೆ.
ಭಾರತೀಯ ಕಿಸಾನ್ ಒಕ್ಕೂಟ ನಡೆಸಿದ್ದ ರೈತ ಹೋರಾಟವನ್ನು ಟಿಕಾಯತ್ ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಹೋರಾಟಕ್ಕೆ ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ. ಇದು ಭಾರತೀಯ ಕಿಸಾನ್ ಒಕ್ಕೂಟದಲ್ಲಿ ಬಿರುಕು ಮೂಡಿಸಿದೆ. ಹೀಗಾಗಿ ಟಿಕಾಯತ್ ಅವರನ್ನು ಒಕ್ಕೂಟದಿಂದ ಹೊರಹಾಕಿದ್ದೇವೆ ಎಂದು ಬಿಕೆಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
PublicNext
15/05/2022 03:50 pm