ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ:H.D.ಕುಮಾರಸ್ವಾಮಿ ಬೆಂಬಲಿಸುವಂತೆ ವಧು-ವರರಿಂದ ಭಿತ್ತಿಪತ್ರ ಪ್ರದರ್ಶನ!

ಕೊಪ್ಪಳ: ಮದುವೆ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಬೆಂಬಲಿಸಿ ಎಂದು ಭಿತ್ತಿಪತ್ರ ಪ್ರದರ್ಶನ ಮಾಡಿದ ವಧು-ವರರು ಇದೀಗ ಸುದ್ದಿ ಪ್ರಪಂಚದ ಕೇಂದ್ರ ಬಿಂದುವಾಗಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಈ ಗ್ರಾಮದ ಜಗದೀಶ್ ನೀಡಗುಂದಿ ಮಠ ಹಾಗು ಪೂಜಾ ಎನ್ನುವ ನೂತನ ವಧು-ವರರಿಂದ ಈ ವಿನೂತನ ಪ್ರಯತ್ನ ನಡೆದಿದೆ.

ರಾಜ್ಯದ ಸಮಗ್ರ ನೀರಾವರಿಗಾಗಿ 2023 ಚುನಾವಣೆಯಲ್ಲಿ ಕುಮಾರಣ್ಣನಿಗೆ ಬೆಂಬಲಿಸಿ ಎಂದು ಮನವಿ ಮಾಡಲಾಗಿದೆ. ನಿನ್ನೆಯಷ್ಟೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಜನತಾ ಜಲಧಾರೆ ಸಮಾರೋಪ ಸಮಾರಂಭ ನಡೆಯಿತು.

ಈ ಮೂಲಕ‌ JDS ಪಕ್ಷದ ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ‌. ಕೊಪ್ಪಳದ ಮದುವೆ ಅರತಕ್ಷತೆಯ ವೇಳೆ

ಆಶೀರ್ವಾದ ಮಾಡಲು ಬಂದ ಅತಿಥಿಗಳು & ಸಂಬಂಧಿಕರಿಗೆ 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿಗೆ ಮತ ಹಾಕಲು ಮನವಿ ಮಾಡಿದ್ದಾರೆ.

ಈ ವಿಭಿನ್ನ ಮದುವೆ ಪ್ರಚಾರ 2023 ರ ಚುನಾವಣಾ ಕಣದಲ್ಲಿನ ಆಕಾಂಕ್ಷಿಗಳನ್ನು ಸಖತ್ತಾಗಿ ಆಕರ್ಷಿಸಿದೆ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

15/05/2022 09:09 am

Cinque Terre

75.28 K

Cinque Terre

10

ಸಂಬಂಧಿತ ಸುದ್ದಿ