ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪಕ್ಷದ ಆಂತರಿಕ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವ ಅವಶ್ಯಕತೆ ಏನಿತ್ತು? ನಲಪಾಡ್ ವಾಗ್ದಾಳಿ

ಮೈಸೂರು: ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮುಹಮ್ಮದ್‌ ನಲಪಾಡ್ ಹಾಗೂ ನಟಿ ರಮ್ಯಾ ನಡುವಿನ ಟಾಕ್ ವಾರ್ ಮುಂದುವರಿದಿದೆ. ಮೈಸೂರಿನಲ್ಲಿ ರಮ್ಯಾ ವಿರುದ್ಧ ನಲಪಾಡ್ ವಾಗ್ದಾಳಿ ನಡೆಸಿದ್ದಾರೆ.

ನಾನು ರಮ್ಯಾ ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುತ್ತಿಲ್ಲ. ನಮ್ಮ ನಾಯಕರ ಬಗ್ಗೆ ಯಾರೇ ಮಾತನಾಡಿದರು. ಅದಕ್ಕೆ‌ ನಾನು ರಿಯಾಕ್ಟ್ ಮಾಡುತ್ತೇನೆ. ಪಕ್ಷದ ಆತಂರಿಕ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವ ಅವಶ್ಯಕತೆ ಏನಿತ್ತು ಅಂತ ಹೇಳಿದರು. ನಾನೇನು ರಮ್ಯಾಗೆ ಪಾಠ ಮಾಡಲು ಹೋಗಿಲ್ಲ. ಮುಂದೆಯೂ ಅವರಿಗೆ ಪಾಠ ಮಾಡಲ್ಲ. ನನ್ನ ವಿಚಾರ ವೈಯಕ್ತಿಕ. ಅದು ಹೊಸದೇನಲ್ಲ. ಅದನ್ನ ಪ್ರಸ್ತಾಪ ಮಾಡೋದ್ರಿದ ರಮ್ಯಾಗೆ ಏನು ಒಳ್ಳೇದಾಗುತ್ತೆ ಗೊತ್ತಿಲ್ಲ. ಪಕ್ಷದಲ್ಲಿ ಒಂದು ಪರ್ಸೆಂಟ್ ಕೂಡ ಭಿನ್ನಾಪ್ರಾಯ ಇಲ್ಲ. ನಮ್ಮ ನಾಯಕ ರಾಹುಲ್ ಗಾಂಧಿ ಪಕ್ಷದ ವಿಚಾರ ವೇದಿಕೆಯಲ್ಲಿ ಮಾತಾಡಬೇಡಿ ಎಂದಿದ್ದಾರೆ. ಅದನ್ನ ನಾವು ಪಾಲಿಸುತ್ತೇವೆ. ನಾವು ಸರಿಯಾಗಿದ್ದೇವೆ. ಸರಿ ಮಾಡಿಕೊಳ್ಳುವ ಅವಶ್ಯಕತೆ ಏನಿಲ್ಲ. ರಮ್ಯಾ ಇದನ್ನೆಲ್ಲ ನಿಲ್ಲಿಸಬೇಕು. ನನ್ನ ಮೇಲೆ ಅಸಮಾಧಾನ ಇದ್ರೆ ಪೋನ್‌ನಲ್ಲಿ ಮಾತಾಡಿ. ಸೋಷಿಯಲ್ ಮೀಡಿಯಾದಲ್ಲಿ ಬೇಡ ಅಂತ ನಲಪಾಡ್‌ ತಿಳಿಸಿದರು.

Edited By : Manjunath H D
PublicNext

PublicNext

13/05/2022 11:05 pm

Cinque Terre

120.33 K

Cinque Terre

8

ಸಂಬಂಧಿತ ಸುದ್ದಿ