ಬೆಂಗಳೂರು: ಸ್ಯಾಂಡವುಡ್ ಕ್ವೀನ್ ರಮ್ಯಾ ಸದ್ಯಕ್ಕೆ ಕಾಂಗ್ರೆಸ್ ನಾಯಕರನ್ನ ಬಿಡೋ ಹಾಗೆ ಕಾಣೋದೇ ಇಲ್ಲ. ಎಲ್ಲರೂ ಒಂದಾಗಲೇಬೇಕು ಅಂತಲೇ ಹೇಳ್ತಿರೋ ರಮ್ಯಾ, ಡಿಕೆಶಿ ಹಾಗೂ ಎಂಬಿ ಪಾಟೀಲರ ಜೊತೆಗಿರೋ ಆ ಒಂದು ಫೋಟೋವನ್ನ ಹಂಚಿಕೊಂಡು ಗುಡ್ ಜಾಬ್ ಅಂತಲೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ರಾಜಸ್ಥಾನದ ಉದಯಪುರದಲ್ಲಿ ಸದ್ಯ ಚಿಂತನ-ಮಂಥನ ಸಭೆ ನಡೆಯುತ್ತಿದೆ. ಈ ಒಂದು ಸಭೆಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೋಗಿದ್ದಾರೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ಇಲ್ಲಿಗೆ ಆಗಮಿಸಿದ್ದಾರೆ.
ಇದೇ ಸಮಯದಲ್ಲಿಯೇ ಡಿಕೆಶಿ ಹೆಗಲ ಮೇಲೆ ಎಂಬಿ ಪಾಟೀಲ್ ಕೈಹಾಕಿದ್ದಾರೆ. ಆತ್ಮೀಯವಾಗಿಯೇ ನಗುತ್ತಲೇ ಏನೋ ಮಾತನಾಡುತ್ತಿದ್ದಾರೆ. ಇವರ ಈ ಫೋಟೋವನ್ನ ರಮ್ಯಾ ತಮ್ಮ ಟ್ವಿಟರ್ ನಲ್ಲಿ ಈ ಒಂದು ಫೋಟೋ ಹಂಚಿಕೊಂಡು Good Job ಅಂತಲೂ ಕಾಮೆಂಟ್ ಮಾಡಿದ್ದಾರೆ.
ಆದರೆ, ರಮ್ಯಾ ಅವರ ಯಾವುದೇ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡಲೇಬಾರದು ಅಂತಲೇ ಕೈ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಅಂತೆ.
PublicNext
13/05/2022 05:59 pm