ಬೆಂಗಳೂರು: ಭಾರತೀಯ ಜನತಾ ಪಾರ್ಟಿಯಲ್ಲಿ ಈಗ ಒಂದು ಹೊಸ ಫಾರ್ಮುಲಾ ಅತಿ ಹೆಚ್ಚು ತಳಮಳ ಹುಟ್ಟುಹಾಕಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಈ ಒಂದು ಫಾರ್ಮುಲಾ ಪ್ಲಾನ್ ಮಾಡಿದ್ದಾರೆ.
ಹೌದು. ಮುಂದಿನ ಚುನಾವಣೆ ಇರಲಿ,ಸಂಪುಟ ಪುನಾರಚನೇನೆ ಆಗಿರಲಿ, ಅಂತಹವರಿಗೆ ಮ್ಯಾರೇಜ್ ಸರ್ಟಿಫಿಕೆಟ್ ಹಾಗೂ ಬರ್ತ್ ಸರ್ಟಿಫಿಕೆಟ್ ಕಡ್ಡಾಯ ಅನ್ನೋದೇ ಈ ಫಾರ್ಮುಲಾದ ಒಟ್ಟು ತಿರುಳು.
ಈ ಒಂದು ಫಾರ್ಮುಲಾದಿಂದ ಪಕ್ಷದಲ್ಲಿರೋ ಕೌಟುಂಬಿಕ ರಾಜಕೀಯಕ್ಕೆ ಕಡಿವಾಣ ಹಾಕಲೆಂದೇ ಈ ಒಂದು ಫಾರ್ಮುಲಾ ಜಾರಿಗೆ ಬಂದ್ರು ಬರಬಹುದು ಅಂತಲೇ ಹೇಳಾಗುತ್ತಿದೆ.
ಅಪ್ಪ ಬಿಜೆಪಿಯಲ್ಲಿ ಶಾಸಕರಾಗಿದ್ರೇ, ಮಗನಿಗೆ ಟಿಕೆಟ್ ಕೊಡೊವಂತಿಲ್ಲ. ಗಂಡ ಪಕ್ಷದ ಶಾಸಕ ಆಗಿದ್ರೆ ಪತ್ನಿಗೆ ಟಿಕೆಟ್ ಕೊಡೋವಂತಿಲ್ಲ. ಇದು ಒಂದು ವೇಳೆ ಜಾರಿಗೆ ಬಂದ್ರೆ, ಪಕ್ಷದ ಮೂವತ್ತಕ್ಕೂ ಹೆಚ್ಚು ನಾಯಕರು ಟಿಕೆಟ್ ವಂಚಿತರಾಗುತ್ತಾರೆ.
PublicNext
13/05/2022 04:25 pm