ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ 3 ದಿನ 'ಕಾಂಗ್ರೆಸ್ ನವ ಸಂಕಲ್ಪ ಶಿಬಿರ

ಜೈಪುರ: ಇಂದಿನಿಂದ ಉದಯಪುರದಲ್ಲಿ 3 ದಿನ ನವ ಸಂಕಲ್ಪ ಶಿಬಿರ ಆರಂಭವಾಗಲಿದೆ. ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.ಶಿಬಿರ ಹಿನ್ನೆಲೆಯಲ್ಲಿ ನಗರೆದೆಲ್ಲೆಡೆ ಕಾಂಗ್ರೆಸ್ ಧ್ವಜಗಳು, ಬ್ಯಾನರ್ ಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭಾವಚಿತ್ರಗಳು ರಾರಾಜಿಸುತ್ತಿವೆ. ಪ್ರವಾಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರ ಬೃಹತ್ ಹೋರ್ಡಿಂಗ್ಸ್ ಗಳು, ಫ್ಲೆಕ್ಸ್ ಗಳು ಕಂಡುಬರುತ್ತಿವೆ.

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆರು ಸಮಿತಿಗಳ ಸಮನ್ವಯಕಾರರ ಸಭೆ ನಡೆಯಲಿದೆ. ನಾಳೆ ಸಮಿತಿ ಚರ್ಚೆ ನಡೆಯಲಿದ್ದು, ರಾತ್ರಿ 8 ಗಂಟೆಯವರೆಗೂ ಗುಂಪು ಚರ್ಚೆ ನಡೆಯಲಿದೆ.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುರಿತ ಚಿಂತನ ಮಂಥನ ಶಿಬಿರದಲ್ಲಿ ನಡೆಯಲಿರುವ ಸಮಾಲೋಚನೆಯ ಮಾಹಿತಿ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಎಲ್ಲಾ ಪ್ರತಿನಿಧಿಗಳಿಗೆ ನಿರ್ದೇಶನಗಳನ್ನು ನೀಡಿದೆ.

Edited By : Nirmala Aralikatti
PublicNext

PublicNext

13/05/2022 11:58 am

Cinque Terre

44.31 K

Cinque Terre

3

ಸಂಬಂಧಿತ ಸುದ್ದಿ